ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದ್ದರಿಂದ ಎಲ್ಲಾ ವಸ್ತುಗಳ ಬೆಲೆ ಸಾಗಾಣಿಕೆ ವೆಚ್ಚ ಏರಿಕೆಯೊಂದಿಗೆ ಹೆಚ್ಚಳವಾಗಿದೆ.
ಆದರೆ ನೆರೆಯ ಮಹಾರಾಷ್ಟ್ರ ಸರ್ಕಾರ ಮಾತ್ರ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 65 ಪೈಸೆ ಇಳಿಕೆ ಮಾಡಿ, ಡೀಸೆಲ್ ಬೆಲೆಯನ್ನು ಸಹ ಲೀಟರ್ ಗೆ 2 ರೂಪಾಯಿ 60 ಪೈಸೆ ಕಡಿಮೆ ಮಾಡಿದೆ. ಪರಿಣಾಮ ಮುಂಬಯಿ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ಎಲ್ಲೆಡೆ ಸರ್ವ ರೀತಿಯ ಉದ್ಯಮಗಳು, ಜನಸಾಮಾನ್ಯರು ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರಕ್ಕೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿವೆ.