ಬೆಂಗಳೂರು: ವಿಮಾನ ದುರಂತದಲ್ಲಿ ಅಜಿತ್ ಪವಾರ್ ಜತೆಗಿದ್ದ ಐವರು ಸಿಬ್ಬಂದಿಯೂ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ಪತ್ತೆಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮಹಾರಾಷ್ಟç ಡಿಸಿಎಂ ಅಜಿತ್ ಪವಾರ್ ಜತೆಗೆ ಅವರ ಭದ್ರತಾ ಸಹಾಯಕ ವಿಂದೀಪ್ ಜಾಧವ್, ಆಪ್ತ ಸಹಾಯಕಿ ಪಿಂಕಿ ಮಾಲಿ, ಫೈಲೆಟ್ಗಳಾದ ಸುಮಿತ್ ಮತ್ತು ಸಹಾಯಕ ಫೈಲೆಟ್ ಶಾಂಭವಿ ಪಾಟೀಲ್ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ದುರ್ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಐವರ ಶವಗಳನ್ನು ಬಾರಾಮತಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಜಿತ್ ಪವಾರ್ ಅವರ ಮೃಹದೇಹವನ್ನು ಅವರ ವಾಚ್ನಿಂದ ಪತ್ತೆಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.

