ಸುದ್ದಿ

ಟ್ರ್ಯಾಕ್ಟ‌ರ್ ಟ್ರೈಲರ್ ಕಳ್ಳನ ಬಂಧನ: ನಾಲ್ಕು ಟ್ರ್ಯಾಕ್ಟ‌ರ್ ಟ್ರೈಲ‌ರ್ ವಶ

Share It

ಬೆಳಗಾವಿ : ಟ್ರ್ಯಾಕ್ಟರ್ ಟ್ರೈಲರ್ ಕಳವು ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ₹5 ಲಕ್ಷ ಮೌಲ್ಯದ ನಾಲ್ಕು ಟ್ರ್ಯಾಕ್ಟರ್ ಟ್ರೈಲರ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಟ್ರ್ಯಾಕ್ಟರ್ ಎಂಜಿನ್‌ನ್ನು ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ.

ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಅಡಿವೆಪ್ಪ ನಾಗಪ್ಪ ಕಳಸನ್ನವರ (34) ಬಂಧಿತ.

ಈತ ಸಾಣಿಕೊಪ್ಪ ಗ್ರಾಮದ ಬಳಿ ಟ್ರ್ಯಾಕ್ಟ‌ರ್ ಟ್ರೈಲರ್ ಕಳುವು ಮಾಡಿದ್ದ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕಳ್ಳನ ಪತ್ತೆಗೆ ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್.ಪಿ.ಗಳಾದ ಶ್ರುತಿ ಕೆ, ಆ‌ರ್.ಬಿ.ಬಸರಗಿ, ಡಿವೈಎಸ್ಪಿ ರವಿ ನಾಯ್ಕ, ಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page