ಅಪರಾಧ ಸುದ್ದಿ

ನೆರವಿಗಾಗಿ ಕರೆ ಮಾಡಿದ ಮಹಿಳೆ ಮೇಲೆ ಪೊಲೀಸ್ ದರ್ಪ: ಆಡಿಯೋ ವೈರಲ್

Share It

ಹಾಸನ: ನೆರವಿಗಾಗಿ 112 ಕರೆ ಮಾಡಿದ್ದ ಮಹಿಳೆಯ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ಕೂಗಾಡಿ, ದರ್ಪ ತೋರಿಸಿರುವ ಆಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಮಹಿಳೆಯ ಮೇಲೆ ಕೂಗಾಡಿರುವ 112 ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದೆ.

ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 112 ಕರೆ ಮಾಡಿದ್ದ ಅರ್ಪಿತಾ ಎಂಬ ಮಹಿಳೆ ತನಗೆ ಪತಿಯ ಮನೆಯವರಿಂದ ಕಿರುಕುಳವಿದೆ ಎಂದು ಹೇಳಿಕೊಂಡಿದ್ದರು. ಮಾಹಿತಿ ನಂತರ ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ ಆಕೆಗೆ ವಿಚಾರಿಸಿ, ದೂರು ನೀಡುವಂತೆ ಹೇಳಿ ವಾಪಸ್ ಆಗಿದ್ದರು.

ಅನಂತರವೂ ಮಹಿಳೆ 112 ಗೆ ಕರೆ ಮಾಡಿದ್ದರಿಂದ ಸಿಬ್ಬಂದಿ ಸಿಡಿಮಿಡಿಗೊಂಡು ಕೂಗಾಡಿದ್ದಾರೆ ಎನ್ನಲಾಗಿದೆ. ಇದೀಗ ಮಹಿಳೆಯ ಮೇಲೆ ಪೊಲೀಸ್ ಸಿಬ್ಬಂದಿ ಕೂಗಾಡಿರುವ ಆಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸ್ ಅಧಿಕಾರಿಯ ವರ್ತನೆಯ ವಿರುದ್ಧ ಕಿಡಿಕಾರಿದ್ದಾರೆ.

ಕಿರುಕುಳ ನೀಡಿದ ಸಂದರ್ಭದಲ್ಲಿ ಭಯದಿಂದ ಕರೆ ಮಾಡಿರಬಹುದು. ಅದನ್ನು ತಾಳ್ಮೆಯಿಂದ ಆಲಿಸಿ ಸಮಸ್ಯೆ ಬಗೆಹರಿಸುವುದು ಪೊಲೀಸರ ಕರ್ತವ್ಯ. ಅದನ್ನು ಬಿಟ್ಟು ಮಹಿಳೆಯ ಮೇಲೆ ಕೂಗಾಡಿರುವುದು ಎಷ್ಟು ಸರಿ? ಇಂತಹ ಅಧಿಕಾರಿಗಳಿಂದಲೇ ಸಮಸ್ಯೆ ಹೇಳಿಕೊಳ್ಳಲಾಗದೆ ಎಷ್ಟೋ ಹೆಣ್ಣುಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.


Share It

You cannot copy content of this page