ಅಪರಾಧ ಸುದ್ದಿ

ವಿದ್ಯಾರ್ಥಿನಿಗೆ ಪೊಲೀಸ್ ಕಾನ್ಸ್ಟೇಬಲ್ ಲೈಂಗಿಕ ಕಿರುಕುಳ : ಫೋಕ್ಸೋ ಕಾಯ್ದೆಯಡಿ ಬಂಧನ

Share It

ಬೆಂಗಳೂರು : ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಆರ್.ಟಿ.ನಗರದ ಪೊಲೀಸ್ ಪೇದೆ ಯಮುನಾ ನಾಯಕ್ ಎಂದು ಹೇಳಲಾಗಿದೆ. ಯಮುನಾ ನಾಯಕ್ ಫ್ರೀಡಂ ಪಾರ್ಕ್ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಈ ವೇಳೆ ಸ್ವತಂತ್ರö್ಯ ಪಿಯುಸಿ ವಿದ್ಯಾರ್ಥಿನಿಗೆ ಲೈಗಿಂಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿದೆ.

ಈ ಸಂಬಂಧ ಪಿಯುಸಿ ವಿದ್ಯಾರ್ಥಿನಿ ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು. ಉಪ್ಪಾರಪೇಟೆ ಪೊಲೀಸರು ಯುವತಿಯ ದೂರಿನನ್ವಯ ಪೋಕ್ಸೋ ಕಾಯ್ದೆ ದಾಖಲಿಸಿಕೊಂಡಿದ್ದು, ಯಮುನಾ ನಾಯಕ್ ಅವರನ್ನು ಬಂಧಿಸಿದ್ದಾರೆ.


Share It

You cannot copy content of this page