ರೇಣುಕಾಸ್ವಾಮಿ ಕೊಲೆ ಕೇಸ್: ಚಿತ್ರದುರ್ಗದಲ್ಲಿ ಪೊಲೀಸರಿಂದ ಸ್ಥಳ ಮಹಜರು ಕಾರ್ಯ
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಪೊಲೀಸರು ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದಿಂದ ಅಧ್ಯಕ್ಷ ರಾಘವೇಂದ್ರ ಮನೆಯಲ್ಲಿ ಸ್ಥಳ ಮಹಜರು ನಡೆಸಿದರು.
ರೇಣುಕಾಸ್ವಾಮಿ ಕೊಲೆ ಮಾಡುವ ಮುನ್ನ ಆತನನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪ ಹೊತ್ತಿರುವ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು ಅಲಿಯಾಸ್ ರಾಘವೇಂದ್ರ ಮನೆಯಲ್ಲಿ ಸುಮಾರು 2 ಗಂಟೆಗಳ ಕಾಲ ಬಾಗಿಲು ಹಾಕಿಕೊಂಡು ಕೂಲಂಕುಷವಾಗಿ ಸ್ಥಳ ಮಹಜರು ನಡೆಸಿದರು.
ಬಳಿಕ ಕಾರು ಚಾಲಕ ರವಿಯ ಐನಹಳ್ಳಿ ಕುರುಬರಹಟ್ಟಿಯ ಮನೆಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದರು. ಕಿಡ್ನಾಪ್ ಮಾಡಲು ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದರು.