ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎ-2 ಆರೋಪಿಯಾಗಿರುವ ನಟ ದರ್ಶನ್ ರನ್ನು ಮೈಸೂರಿಗೆ ಕರೆದೊಯ್ದು ಅಲ್ಲಿನ ರ್ಯಾಡಿಸನ್ ಬ್ಲೂ ಹೋಟೆಲ್, ದರ್ಶನ್ ನಿವಾಸ, ತೋಟದ ಮನೆಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಮೈಸೂರಿನಲ್ಲಿ ಸೋಮವಾರ ದರ್ಶನ್ ಅಭಿಮಾನಿಗಳು ಯಾವುದೇ ಗಲಾಟೆ, ಪ್ರತಿಭಟನೆ ನಡೆಸದಂತೆ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಕೊಲೆಯ ನಂತರ ಮೈಸೂರು ಹೋಟೆಲ್ ನಲ್ಲಿ ದರ್ಶನ್ ಉಳಿದಿದ್ದರು. ಪೊಲೀಸರು ಅವರನ್ನು ಮೈಸೂರಿನಿಂದಲೇ ಬಂಧನ ಮಾಡಿದ್ದರು. ಹೀಗಾಗಿ, ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಡಿ ಗ್ಯಾಂಗ್ ಡ್ರಿಲ್ ನಡೆಯಲಿದೆ.

