ಮದುವೆಯಾಗಲು ಮರಿ ರಾಜಕಾರಣಿ ಮೀನಾಮೇಷ: ಮರ್ಮಾಂಗವನ್ನೇ ಕಟ್ ಮಾಡಿದ ಡಾಕ್ಟರ್

Share It

ಸರನ್ (ಬಿಹಾರ): ಮದುವೆಯಾಗುವುದಾಗಿ ನಂಬಿಸಿ ನಂತರ ಮೀನಾಮೇಷ ಎಣಿಸುತ್ತಿದ್ದ ಪ್ರಿಯಕರ ವಾರ್ಡ್ ಕೌನ್ಸಲರ್‌ನ ಮರ್ಮಾಂಗವನ್ನೇ ವೈದ್ಯ ಪ್ರೇಯಸಿ ಕತ್ತರಿಸಿರುವ ಘಟನೆ ಬಿಹಾರದ ಸರನ್ ನಲ್ಲಿ ನಡೆದಿದೆ.

ಬಿಹಾರದ ಸರನ್‌ನಲ್ಲಿ ವೈದ್ಯೆಯೊಬ್ಬರನ್ನು ಅದೇ ವಾರ್ಡ್ ಕೌನ್ಸಿಲರ್ ಹಾಜೀಪುರದ ನಿವಾಸಿಯಾದ ವೈದ್ಯೆಯೊಬ್ಬರನ್ನು ಪ್ರೀತಿಸುತ್ತಿದ್ದರು. ಬಹಳ ದಿನಗಳಿಂದ ಸಲುಗೆಯಿಂದ ಇದ್ದ, ಕೌನ್ಸಲರ್, ನಂತರ ಮದುವೆಯಾಗಲು ಮೀನಾಮೇಷ ಎಣಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ವೈದ್ಯೆ ಕೃತ್ಯ ಎಸಗಿದ್ದಾಳೆ.

ವೈದ್ಯೆಗೆ ಪ್ರಿಯಕರ ಬಹಳದಿನಗಳಿಂದಲೂ ಮದುವೆಯಾಗುವುದಾಗಿ ಭರವಸೆ ನೀಡುತ್ತಲೇ ಬಂದಿದ್ದರು. ಆದರೆ ಇಂದು ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವೈದ್ಯೆ ತನ್ನ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆರೋಪಿ ವೈದ್ಯೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಮಧುರಾ ಪೊಲೀಸ್ ಠಾಣೆಯ ಪೊಲೀಸರು ಮಹಿಳಾ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ಗಾಯಗೊಂಡ ವಾರ್ಡ್ ಕೌನ್ಸಿಲರ್ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಮಲಗಿದ್ದರು. ಪೊಲೀಸರು ಆತನನ್ನು ಮರ್ಹೌರಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಲ್ಲಿಂದ ಚಾಪ್ರಾಕ್ಕೆ ಕಳುಹಿಸಿದರು. ಪರೀಕ್ಷೆ ನಂತರ, ಚಪ್ರಾದ ವೈದ್ಯರು ವಾರ್ಡ್ ಕೌನ್ಸಿಲರ್ ಅನ್ನು ಉತ್ತಮ ಚಿಕಿತ್ಸೆಗಾಗಿ ಪಿಎಂಸಿಎಚ್‌ಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ರಿಜಿಸ್ಟಾರ್ ಮ್ಯಾರೇಜ್ ನಿರಾಕರಿಸಿದ್ದ ಕೌನ್ಸಲರ್: ವಾರ್ಡ್ ಕೌನ್ಸಿಲರ್ ಮಹಿಳಾ ವೈದ್ಯೆಯೊಂದಿಗೆ ಬಹಳ ದಿನಗಳಿಂದ ಸಂಬAಧ ಹೊಂದಿದ್ದರು. ವೈದ್ಯೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರೂ ಪಾಲಿಕೆ ಸದಸ್ಯ ಅದನ್ನು ಮುಂದೂಡುತ್ತಿದ್ದರು. ಜುಲೈ ೧ರ ಸೋಮವಾರ ರಿಜಿಸ್ಟರ್ ಮ್ಯಾರೇಜ್ ನಡೆಯಬೇಕಾಗಿತ್ತು. ಇಬ್ಬರೂ ಮತ್ತೊಮ್ಮೆ ಭೇಟಿಯಾಗಿದ್ದರು. ಆದರೆ ಈ ಬಾರಿಯೂ ಕೌನ್ಸಿಲರ್ ಮದುವೆ ಪ್ರಸ್ತಾಪ ನಿರಾಕರಿಸಲು ಪ್ರಾರಂಭಿಸಿದರು. ಇದರಿಂದ ಸಿಟ್ಟಿಗೆದ್ದ ವೈದ್ಯೆ ಖಾಸಗಿ ಅಂಗವನ್ನೇ ಕತ್ತರಿಸಿದ್ದಾರೆ.


Share It

You May Have Missed

You cannot copy content of this page