ಕ್ರೈಸ್ತ ಧರ್ಮಗುರು ಪೋಪ್ ಪ್ರಾನ್ಸಿಸ್ ನಿಧನ : ವಿಶ್ವದೆಲ್ಲೆಡೆ ಗಣ್ಯಾತಿಗಣ್ಯರ ಕಂಬನಿ
ಬೆಂಗಳೂರು: ಕ್ರೈಸ್ತ ಧರ್ಮಗುರು ಪೋಪ್ ಪ್ರಾನ್ಸಿಸ್ ಇಂದು ನಿಧನರಾಗಿದ್ದು, ಜಗತ್ತಿನಾದ್ಯಂತ ಅವರಿಗೆ ಸಂತಾಪ ವ್ಯಕ್ತವಾಗಿದ್ದು, ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.
ವ್ಯಾಟಿಕನ್ ಸಿಟಿಯ ಚರ್ಚ್ ಮುಖ್ಯಸ್ಥರಾದ ಪೋಪ್ ಪ್ರಾನ್ಸಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಬೆಳಗ್ಗೆ 7.35 ರ ಸುಮಾರಿಗೆ ಉಸಿರು ಚೆಲ್ಲಿದರು ಎಂದು ವ್ಯಾಟಿಕನ್ ಸಿಟಿ ಚರ್ಚ್ ಮೂಲಗಳು ದೃಢಪಡಿಸಿವೆ. ಅವರು ಈಸ್ಟರ್ ಸೋಮವಾರದಂದು ಮರಣವೊಂದಿದ್ದು, ದೇವರ ಬಳಿಗೆ ಮರಳಿ ತೆರಳಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.
ರೋಮ್ ಬಿಷಪ್ ಆಗಿದ್ದ ಪ್ರಾನ್ಸಿಸ್, ಅರ್ಜೆಂಟೈನಾ ದೇಶದಲ್ಲಿ ಜನಿಸಿದ್ದರು. ರೋಮ್ ಬಿಷಪ್ ಆಗಿದ್ದ ಅವರು, ವ್ಯಾಟಿಕನ್ ಸಿಟಿ ಚರ್ಚ್ ನ ಆಡಳಿತ ನೋಡಿಕೊಳ್ಳುತ್ತಿದ್ದರು. ಅವರಿಗೆ ಇಡೀ ವಿಶ್ವವೇ ಕಂಬನಿ ಮಿಡಿದಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.


