ಟಾಕ್ಸಿಕ್ ಟೀಸರ್‌ನಲ್ಲಿ ಅಶ್ಲೀಲ: ಟೀಸರ್ ರದ್ದು ಮಾಡಲು ಎಎಪಿ ಮನವಿ
ಬೆಂಗಳೂರು: ಟಾಕ್ಸಿಕ್ ಟೀಸರ್‌ನಲ್ಲಿ ವಿಪರೀತ ಅಶ್ಲೀಲವನ್ನು ಸೆರೆಹಿಡಿದಿದ್ದು., ಇದು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಲಿದೆ ಎಂದು ಆರೋಪಿಸಿ ಎಎಪಿ ದೂರು ನೀಡಿದೆ.
ಈಗಾಗಲೇ ವಕೀಲರೊಬ್ಬರು ಟಾಕ್ಸಿಕ್ ಟೀಸರ್ ವಿರುದ್ಧ ಸೆನ್ಸಾರ್ ಮಂಡಳೀಗೆ ದೂರು ನೀಡಿದ್ದಾರೆ. ಇದೀಗ ಆಪ್ ಮುಖಂಡರು ದೂರು ನೀಡುವ ಮೂಲಕ ಟಾಕ್ಸಿಕ್ ಟೀಸರ್‌ಗೆ ಆತಂಕ ಎದುರಾಗಿದೆ. ಟೀಸರ್ ಅನ್ನು ರದ್ದು ಮಾಡಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.
ಟಾಕ್ಸಿಕ್ ೮ ಮಿಲಿಯನ್ ವೀವ್ಸ್ ಪಡೆದು, ಈಗಾಗಲೇ ದಾಖಲೆ ಸೃಷ್ಟಿಸಿದೆ. ಕೆಜೆಎಫ್ ದಾಖಲೆಯನ್ನು ಸರಿಗಟ್ಟುವ ಮೂಲಕ ಬಿಡುಗಡೆಯಾದ ಮೂರೇ ದಿನದಲ್ಲಿ ದಾಖಲೆ ಸೃಷ್ಟಿಸಿದೆ. ಈ ನಡುವೆ ಒಂದಿಲ್ಲೊAದು ವಿವಾದಗಳು ಸುತ್ತಿಕೊಳ್ಳುತ್ತಿವೆ.


