ಬೆಂಗಳೂರು: ಬೆಂಗಳೂರಿನಲ್ಲಿ ನಿರ್ವಹಣಾ ಹಾಗೂ ತಾಂತ್ರಿಕ ಕಾಮಗಾರಿಗಳ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುವುದು ಸಾಮಾನ್ಯವಾಗಿದೆ. ಇದೇ ಕ್ರಮದಲ್ಲಿ, ಬುಧವಾರ ಜನವರಿ 21ರಂದು 66/11 ಕೆವಿ ಬಾಣಸವಾಡಿ ಉಪಕೇಂದ್ರದ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಕಡಿತ ಜಾರಿಯಲ್ಲಿರಲಿದೆ.
ಬೆಳಗ್ಗೆಂದಲೇ ಕರೆಂಟ್ ಇರುವುದಿಲ್ಲದ ಕಾರಣ ಸಾರ್ವಜನಿಕರು ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಮುಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಶಾಲೆ ಅಥವಾ ಕಚೇರಿಗೆ ತೆರಳುವವರು ಅಡುಗೆ, ಉಪಾಹಾರ ಸೇರಿದಂತೆ ದಿನನಿತ್ಯದ ಸಿದ್ಧತೆಗಳನ್ನು ಬೇಗನೆ ಮಾಡಿಕೊಂಡು ಕೊಳ್ಳುವುದು ಉತ್ತಮ. ಜೊತೆಗೆ, ಸಂಜೆವರೆಗೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ ನೀರಿನ ಟ್ಯಾಂಕ್‌ಗಳನ್ನು ಮೊದಲೇ ತುಂಬಿಸಿಟ್ಟುಕೊಳ್ಳಲು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:
ಎಚ್‌ಆರ್‌ಬಿಆರ್ ಲೇಔಟ್ (1, 2, 3ನೇ ಬ್ಲಾಕ್‌ಗಳು), ಸರ್ವಿಸ್ ರಸ್ತೆ, ಕಮ್ಮನಹಳ್ಳಿ ಮೇನ್ ರೋಡ್, ಸಿಎಂಆರ್ ರೋಡ್, ಬಾಬುಸಾಪಾಳ್ಯ, ಬಾಲಚಂದ್ರ ಲೇಔಟ್, ಫ್ಲವರ್ ಗಾರ್ಡನ್, ಎಂಎಂ ಗಾರ್ಡನ್, ಆರ್ಕಾವತಿ ಲೇಔಟ್, ಅಂಜನಾದ್ರಿ ಲೇಔಟ್ ಎನ್ಕ್ಲೇವ್, ದಿವ್ಯ ಉನ್ನತಿ ಲೇಔಟ್, ವಿಜಯೇಂದ್ರ ಗಾರ್ಡನ್, ಮಲ್ಲಪ್ಪ ಲೇಔಟ್, ಪ್ರಕೃತಿ ಟೌನ್ಶಿಪ್, ಬಾಲಾಜಿ ಲೇಔಟ್, ಜಿಎನ್ಆರ್ ಗಾರ್ಡನ್, ಚೆಲೆಕರೆ ಹಾಗೂ ಚೆಲೆಕರೆ ವಿಲೇಜ್, 100 ಅಡಿ ರಸ್ತೆ, 80 ಅಡಿ ರಸ್ತೆ, ಸುಬ್ಬಯ್ಯನಪಾಳ್ಯ, ಹೊರಮಾವು, ವಿಜಯ ಬ್ಯಾಂಕ್ ಕಾಲೋನಿ, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಪಪ್ಪಯ್ಯ ಲೇಔಟ್, ಶಕ್ತಿ ನಗರ, ಹೆಣ್ಣೂರು ವಿಲೇಜ್, ಹೆಣ್ಣೂರು ಕ್ರಾಸ್, ಬೃಂದಾವನ ಲೇಔಟ್, ಹೊಯ್ಸಳ ನಗರ, ಜಯಂತಿ ಗ್ರಾಮ, ಬಿಡಿಎ ಕಾಂಪ್ಲೆಕ್ಸ್ ಸುತ್ತಮುತ್ತ, ನರೇಂದ್ರ ಟೆಂಟ್ ಸಮೀಪದ ಪ್ರದೇಶಗಳು.
ಇದಲ್ಲದೆ, ಓಎಂಬಿಆರ್ ಲೇಔಟ್, ಕಸ್ತೂರಿ ನಗರ, ಪಿಲ್ಲರೆಡ್ಡಿ ನಗರ (ಭಾಗಶಃ), ದೊಡ್ಡ ಬಾಣಸವಾಡಿ, ರಾಮಮೂರ್ತಿ ನಗರ ಮೇನ್ ರೋಡ್, ಬಿ. ಚನ್ನಸಂದ್ರ, ಆರ್.ಎಸ್. ಪಾಳ್ಯ, ರಾಜಕುಮಾರ್ ಪಾರ್ಕ್, ವಿಜಯಲಕ್ಷ್ಮೀ ಲೇಔಟ್, ಟ್ರಿನಿಟಿ ಎನ್ಕ್ಲೇವ್, ಸಂಕಲ್ಪ ಲೇಔಟ್, ಗ್ರೀನ್ ಗಾರ್ಡನ್ ಫೇಸ್–2, ಸಮೃದ್ಧಿ ಲೇಔಟ್, ಎಸ್ಎಲ್ವಿ ಲೇಔಟ್, ಡಿಎಸ್-ಮ್ಯಾಕ್ಸ್ ಅಪಾರ್ಟ್‌ಮೆಂಟ್‌ಗಳ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಕಡಿತ ಅವಧಿಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಹಾಗೂ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ವಿದ್ಯುತ್ ಇಲಾಖೆ ಮನವಿ ಮಾಡಿದೆ.

