ನವಲಗುಂದ : ಪುರಸಭೆಯ ವಾಣಿಜ್ಯ ಸಂಕೀರ್ಣ ಕಟ್ಟಡದ ಎಲ್ಲ ವಿದ್ಯುತ್ತ ಮೀಟರ್ ಡಬ್ಬಿಗಳು ಹಾಳಾಗಿದ್ದು ಅವುಗಳ ತೆರೆದುಕೊಂಡಿವೆ.
ಹೃದಯಭಾಗವಾದ ಗಾಂಧಿ ಮಾರ್ಕಿಟ್, ತರಕಾರಿ ಮಾರುಕಟ್ಟೆ ಇರುವುದರಿಂದ ಇಲ್ಲಿ ಸಂಚರಿಸುವ ಗ್ರಾಮೀಣ ಜನರು, ಮಕ್ಕಳು, ಸಾರ್ವಜನಿಕರು, ಜಾನುವಾರಗಳು ಈ ಬಾಗದಲ್ಲಿ ಸಂಚರಿಸುತ್ತಾರೆ. ಯಾವುದೇ ಅನಾಹುತ ಆಗದಂತೆ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮುನ್ನೆಚ್ಚರಿಕೆ ವಹಿಸಿ ವಿದ್ಯುತ್ತ ಮೀಟರ್ ಡಬ್ಬಿಗಳನ್ನು ದುರಸ್ತಿ ಮಾಡಿ ಯಾವುದೇ ಅವಘಡ ಸಂಭವಿಸಿದಂತೆ ಕ್ರಮ ವಹಿಸಬೇಕಾಗಿದೆ.
ಇನ್ನು ಪುರಸಭೆಯ ವಾಣಿಜ್ಯ ಸಂಕೀರ್ಣದ ವಿದ್ಯುತ್ತ ಮೀಟರ್ಗಳು ಹಾಳಾಗಿ ವಿದ್ಯುತ್ತ ತಂತಿಗಳು ಹೊರಬಿದ್ದಿರುತ್ತವೆ. ಅವುಗಳು ತೆರೆದ ಬಾಯಿ ಯಾವ ಸಮಯದಲ್ಲಿ ವಿದ್ಯುತ್ತ ಅವಘಡಕ್ಕೆ ಏಡೆಮಾಡುತ್ತವೆ ಗೊತ್ತಿಲ್ಲ. ತಕ್ಷಣ ಪುರಸಭೆ ಅಧಿಕಾರಿಗಳು ಸ್ಪಂದಿಸಬೇಕೆಂದು ಸಾವ೯ಜನಿಕರು ಒತ್ತಾಯಿಸಿದ್ದಾರೆ.

