ರೇವಣ್ಣ ಪುತ್ರರ ಪುರುಷತ್ವ ಪರೀಕ್ಣೆ ಪುರಾಣ !
ಬೆಂಗಳೂರು: ವಿಭಿನ್ನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ರೇವಣ್ಣ ಪುತ್ರರಾದ ಸೂರಜ್ ಮತ್ತು ಪ್ರಜ್ವಲ್ವ ರೇವಣ್ಣರಿಗೆ ಪುರುಷತ್ವ ಪರೀಕ್ಷೆಯ ಮೂಲಕವೇ ಪೊಲೀಸರು ಮುಜುಗರ ತರುತ್ತಿದ್ದಾರಂತೆ.
ಪ್ರಜ್ವಲ್ ರೇವಣ್ಣನನ್ನು ಬಂಧಿಸಿದ್ದ ಪೊಲೀಸರು, ದಾಖಲಾಗಿರುವ ಪ್ರತಿ ಪ್ರಕರಣಕ್ಕೂ ಒಂದೊಂದು ಬಾರಿಯಂತೆ ಪ್ರಜ್ವಲ್ ಗೆ ಪುರುಷತ್ವ ಪರೀಕ್ಷೆ ನಡೆಸಿದ್ದರು. ಮಹಿಳೆಯರ ಮೇಲೆ ನಡೆಸಿರುವ ದೌರ್ಜನ್ಯ ಪ್ರಕರಣಗಳಾಗಿರುವ ಕಾರಣಕ್ಕೆ ಪುರುಷತ್ವ ಪರೀಕ್ಷೆ ಕಾನೂನಿನ ಇತಿಮಿತಿಯಲ್ಲಿ ಬಹಳ ಮುಖ್ಯವಾಗಿದ್ದು, ಪೊಲೀಸರು ಅದನ್ನು ಪಾಲನೆ ಮಾಡಿದ್ದಾರೆ. ಇದು ಪ್ರಜ್ವಲ್ ರೇವಣ್ಣಗೆ ಮುಜುಗರವಾಗಿದೆಯಂತೆ.
ಪುರುಷತ್ವ ಪರೀಕ್ಷೆಗೆ ಪದೇಪದೆ ಆಸ್ಪತ್ರೆಗೆ ಕರೆದುಕೊಂಡು ಹೋದ ಕುರಿತು ಪ್ರಜ್ವಲ್ ಪೊಲೀಸರ ಮುಂದೆ ಸಿಡುಕಿದರಂತೆ. ಎಷ್ಟು ಸಲ ಅಂತ ಮಾಡಿಸ್ತೀರಿ, ಒಮ್ಮೆ ಮಾಡಿಸಿದ ರಿಪೋರ್ಟನ್ನೆ ಬಳಸಲು ಸಾಧ್ಯವಿಲ್ಲವಾ ಎಂದು ಪ್ರಶ್ನೆ ಮಾಡಿದ್ದರಂತೆ. ಪದೇಪದೆ ಅದನ್ನೇ ಮಾಡಿಸಿಕೊಳ್ಳಲು ನನಗೆ ಮುಜುಗರ ಆಗುತ್ತೆ ಎಂದು ರೋಧಿಸಿದರಂತೆ.
ಇದೀಗ ಯುವಕನೊಬ್ಬನ ಮೇಲೆಯೇ ಅಸಹಜವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪ್ರಜ್ವಲ್ ಸಹೋದರ ಸೂರಜ್ ಸಿಲುಕಿ ಅರೆಸ್ಟ್ ಆಗಿದ್ದಾರೆ. ಇದೀಗ ಪೊಲೀಸರು, ಸೂರಜ್ ರೇವಣ್ಣಗೂ ಪುರುಷತ್ವ ಪರೀಕ್ಷೆ ನಡೆಸಿದ್ದಾರೆ. ಸೂರಜ್ ಗೆ ಇದು ಮೊದಲ ಬಾರಿಯಾದ್ದರಿಂದ ಅವರೇನೂ ಸಿಡುಕಿಲ್ಲ ಎನ್ನಿಸುತ್ತದೆ. ಆದರೆ, ಇದೀಗ ಮತ್ತೊಂದು ದೂರು ದಾಖಲಾಗಿ ಎಫ್ ಐಆರ್ ಆಗಿದೆ. ಆ ಪ್ರಕರಣದ ಲ್ಲಿ ಮತ್ತೇ ಸೂರಜ್ ಪುರುಷತ್ವ ಪರೀಕ್ಷೆಗೆ ಒಳಪಡಬೇಕು. ಇದು ಸಹಜವಾಗಿ ರೇವಣ್ಣ ಮಕ್ಕಳಿಗೆ ಮುಜುಗರ ತಂದೊಡ್ಡಲಿದೆ.

