4.15 ಕ್ಕೆ ಪ್ರಜ್ವಲ್ ಕಸ್ಟಡಿ ಕುರಿತ ಆದೇಶ ಪ್ರಕಟ
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರು ಜೈಲಿಗೋ, ಎಸ್ ಐಟಿ ಕಸ್ಟಡಿಗೋ ಎಂಬುದರ ನಿರ್ಧಾರ 4.15 ಕ್ಕೆ ನಿರ್ಧಾರವಾಗಲಿದೆ.
ವಿದೇಶದಿಂದ ಆಗಮಿಸಿದ ಪ್ರಜ್ವಲ್ ರೇವಣ್ಣರನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಮಾಡಿದ್ದರು. 42 ನೇ ಎಂಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಪ್ರಜ್ವಲ್ ಪರ ವಕೀಲರು ಒಂದೇ ದಿನ ಕಸ್ಟಡಿ ಸಾಕು ಎಂದು ವಾದ ಮಾಡಿದರು.
ಎಸ್ ಐಟಿ ಪರ ವಕೀಲರು, ಅವರನ್ನು ಹದಿನೈದು ದಿನ ಕಾಲ ವಿಚಾರಣೆ ಕಸ್ಟಡಿಗೆ ಕೊಡಬೇಕು. ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಪ್ರಜ್ವಲ್ ವಿಚಾರಣೆಗೆ ಸಹಕಾರ ಮಾಡುವುದು ಸುಳ್ಳು ಎಂದು ವಾದಿಸಿದರು.
ವಾದ ವಿವಾದ ಆಲಿಸಿದ ನ್ಯಾಯಾಧೀಶರು, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ, ನಂತರ ಅದನ್ನು ಅತ್ಯಾಚಾರ ಪ್ರಕರಣ ಎಂದು ಬದಲಾಯಿಸಿದ್ದು ಏಕೆ ಎಂದು ಪ್ರಶ್ನಿಸಿದರು. ನಂತರ ಆದೇಶವನ್ನು 4.15 ಕ್ಕೆ ನಿಗದಿಪಡಿಸಿದರು.