ಅಪರಾಧ ರಾಜಕೀಯ ಸುದ್ದಿ

ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲ್ ಸೇರಿದ ಪ್ರಜ್ವಲ್ ರೇವಣ್ಣ

Share It


ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

ಕೆ.ಆರ್. ನಗರ ಮಹಿಳೆಯ ಅಪಹರಣ, ಲೈಂಗಿಕ ದೌರ್ಜನ್ಯ, ಪೆನ್ ಡ್ರೈವ್ ಪ್ರಕರಣ ಸೇರಿದಂತೆ ವಿವಿಧ ಪ್ರಕರಣದಲ್ಲಿ ಎಸ್ ಐಟಿ ವಶದಲ್ಲಿದ್ದ ಪ್ರಜ್ವಲ್ ರೇವಣ್ಣ ಕಸ್ಟಡಿ ಅವಧಿ ಮುಗಿದಿದ್ದು, 42 ನೇ ಎಸಿಎಂಎಂ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಲೈಂಗಿಕ ದೌರ್ಜನ್ಯ ದ ನಂತರ ನಾಪತ್ತೆಯಾಗಿದ್ದ ಪ್ರಜ್ವಲ್ ಜರ್ಮನಿಯಲ್ಲಿ ತಲೆ ಮೃಸಿಕೊಂಡಿದ್ದು, ಕಾನೂನಿ ಕುಣಿಕೆ ಬಿಗಿಯಾಗುತ್ತಿದ್ದಂತೆ ವಾಪಸ್ ಬಂದು ಎಸ್ ಐಟಿ ಮುಂದೆ ಶರಣಾಗಿದ್ದರು. 14 ದಿನಗಳು ತನ್ನ ವಶಕ್ಕೆ ಪಡೆದಿದ್ದ ಪೊಲೀಸರು ಅನೇಕ ಮಾಹಿತಿ ಸಂಗ್ರಹಿಸಿದ್ದಾರೆ. ಈ ನಡುವೆ ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ.

ಎಸ್ಐಟಿ ಮತ್ತೊಂದು ಪ್ರಕರಣದಲ್ಲಿ ಮರಳಿ ವಶಕ್ಕೆ ಪಡೆಯಲು ಸಿದ್ಧವಾಗಿದ್ದು, ಬಾಡಿ ವಾರೆಂಟ್ ಮೂಲಕ ಪ್ರಜ್ವಲ್ ನನ್ನು ಮರಳಿ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಈ ನಡುವೆ ಜೈಲಿಗೆ ಶಿಪ್ಟ್ ಆಗಿರುವ ಪ್ರಜ್ವಲ್, ಯಾವಾಗ ಬೇಕಿದ್ದರೂ ಎಸ್ಐಟಿ ವಶಕ್ಕೆ ಬರಬಹುದು. ಈ ಹಿಂದೆ ಮಾಜಿ ಸಚಿವ ರೇವಣ್ಣ ಜೈಲು ಸೇರಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಪ್ರಜ್ವಲ್ ತಾಯಿ ಭವಾನಿ ರೇವಣ್ಣಗೆ ಹೈಕೋರ್ಟ್ ಜಾಮೀನು ನೀಡಿರುವುದು ಅವರ ಕುಟುಂಬಕ್ಕೆ ಕೊಂಚ ನೆಮ್ಮದಿ ತರಿಸಿದೆ.


Share It

You cannot copy content of this page