ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆಯ ಅಪಹರಣ ಮಾಡಿ ಕೂಡಿಟ್ಟ ಆರೋಪದಲ್ಲಿ ಬಂಧಿತರಾಗಿದ್ದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದೆ.
ಕೆ.ಆರ್. ನಗರದ ಮಹಿಳೆಯೊಬ್ಬರು ಪ್ರಜ್ವಲ್ ವಿರುದ್ಧ ದೂರು ನೀಡಿದ್ದು, ಆಕೆಯನ್ನು ಕಿಡ್ನಾಪ್ ಮಾಡಿ, ತೋಟದ ಮನೆಯಲ್ಲಿ ಕೂಡಿಡಲಾಗಿತ್ತು. ಈ ಆರೋಪದಲ್ಲಿ ಭವಾನಿ ರೇವಣ್ಣ ಸೇರಿದಂತೆ ಐದು ಜನರ ಮೇಲೆ ದೂರು ದಾಖಲಾಗಿತ್ತು.
ಭವಾನಿ ರೇವಣ್ಣ ಅವರಿಗೆ ಮಹಿಳೆಯೆಂಬ ಕಾರಣ ನೀಡಿ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಉಳಿದ ಆರೋಪಿಗಳು ಎಸ್ಐಟಿ ವಶದಲ್ಲಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಇದೀಗ ರಾಜಗೋಪಾಲ್, ಎಚ್.ಕೆ.ಸುಜಯ್, ಎಸ್.ಟಿ ಕೀರ್ತಿ, ಸತೀಶ್ ಬಾಬಣ್ಣ, ಅಜಿತ್, ಮಧು ಎಚ್.ಎನ್ ಸೇರಿ ಎಲ್ಲ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿ, ತೀರ್ಪನ್ನು ಕಾಯ್ದಿರಿಸಿದೆ.
Updating….

