15 ಕೆಜಿ ಬಾಕ್ಸ್‌ಗೆ 500 ರಿಂದ 800 ರವರೆಗೆ ಮಾರಾಟ | ರೈತರಿಗೆ ಮೊಗದಲ್ಲಿ ಮಂದಹಾಸ
ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ರೈತರು ಟೊಮೇಟೊ ಬೆಳೆಯನ್ನು ಬೆಳೆಯುತ್ತಿದ್ದಾರೆ. ಬಯಲು ಸೀಮೆಯ ಪ್ರದೇಶವಾಗಿರುವುದರಿಂದ ಇಲ್ಲಿ ಯಾವುದೇ ನದಿ ಮೂಲಗಳು ನಾಲೆಗಳು ಇಲ್ಲ.
ಕೇವಲ ಮಳೆಯ ಆಶ್ರಿತ ಮತ್ತು ಕೊಳವೆಬಾವಿಗಳನ್ನು ನಂಬಿ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳನ್ನು ರೈತರು ಮಾಡುತ್ತಿದ್ದಾರೆ. ಕಳೆದ ವರ್ಷ ಮಳೆಯಾಗದೆ ರೈತರಿಗೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದರು. ಟೊಮೊಟೊ ಬೆಲೆ ಮತ್ತೆ ಏರುತ್ತಿದೆ. ಗ್ರಾಹಕರ ಜೇಬಿಗೆ ಕತ್ತರಿ ಹಾಕುವಂತಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಟೊಮೊಟೊ ಇಳುವರಿ ಕಡಿಮೆಯಾಗಿದೆ.
ತೀವ್ರವಾಗಿ ಬರದಿಂದ ಟೊಮೇಟೊ ಬೆಳೆದವರು ಸಂಖ್ಯೆ ಕಡಿಮೆಯಾಗಿದೆ. ಕೆರೆಗಳಲ್ಲಿ ನೀರು ಬತ್ತಿ ದ ಕಾರಣ ಕೊಳವೆಬಾವಿಗಳಲ್ಲೂ ಸಹ ನೀರಿನ ಪ್ರಮಾಣ ಕುಸಿದಿದ್ದರಿಂದ ಟೊಮೊಟೊ ನಾಟಿ ಮಾಡುವುದು ಕುಸಿದಿದೆ. ಬರಗಾಲದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ಬೆಳೆ ಸಂರಕ್ಷಣೆ ಮಾಡುವುದು ಬೆಳೆಗಾರರಿಗೆ ಸವಾಲಿನ ಕೆಲಸವಾಗಿತ್ತು.
ಆಗ ನೀರಿನ ಕೊರತೆ ಇತ್ತು ಎಂಬುದು ಬಿಟ್ಟರೆ ರೋಗಗಳ ಬಾಧೆ ಅಷ್ಟೇನೂ ಇರಲಿಲ್ಲ. ಆದರೆ ನೀರಿನ ಮಟ್ಟದಲ್ಲಿ ಇಳುವರಿ ಸಿಗುತ್ತಿರಲಿಲ್ಲ. ಜಿಲ್ಲೆಯಲ್ಲಿ 10 -15 ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ಟೊಮೆಟೊ ಬೆಳೆ ಸಂರಕ್ಷಿಸುವುದು ಕಷ್ಟವಾಗುತ್ತಿದೆ. ಮೋಡ ಮುಸುಕಿನ ವಾತಾವರಣದಿಂದ ಬೆಳೆಗೆ ಅಂಗಮಾರಿ, ಎಲೆ ಮುದುಡು ರೋಗ, ಕಾಂಡಕೊರಕ. ನುಸಿ ರೋಗ ಬಾದೆ ಬಾದಿಸುತ್ತಿದೆ.
ಎಷ್ಟೇ ಔಷಧ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಲಭ್ಯವಿರುವ ಸಾಲನ್ನು ಕೊಯ್ದು ಮಾಡಿಕೊಂಡು ಹಾಗೆಯೇ ಬಿಡುವ ಪರಿಸ್ಥಿತಿ ಎದುರಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಡಬಲ್ ಸೆಂಚುರಿ ಬಾರಿಸಿ ಬಾರಿ ಸುದ್ದಿಯಾಗಿದ್ದ ಟೊಮೊಟೊ ಸೆಂಚುರಿಯತ್ತ ಮುನ್ನುಗ್ಗುತ್ತಿದೆ. ಅಡುಗೆ ಮಾಡಲು ಯಾವ ತರಕಾರಿ ಇಲ್ಲದಿದ್ದರೂ ಪರವಾಗಿಲ್ಲ. ಒಂದೇ ಒಂದು ಟೊಮೆಟೊ ಇದ್ದರೆ ಸಾಕು ಅಂದಿನ ದಿನಕಳೆಯಬಹುದು.
ಕಳೆದ ವರ್ಷ ಟಮೋಟ ಬೆಳೆದು ಶ್ರೀಮಂತರಾದವರು ಇದ್ದರೆ ಸಾಲದ ಸುಲಿಗೆ ಸುಲುಕಿ ಇರುವರ ಹಲವಾರು ನಿದರ್ಶನಗಳನ್ನು ಕಾಣಬಹುದಾಗಿದೆ. ಇದಕ್ಕೆ ಗ್ರಾಮಾಂತರ ಭಾಗದಲ್ಲಿ ಇದು ಲಾಟರಿ ಬೆಳೆ ಎಂದು ಹೇಳುತ್ತಾರೆ. ಬೆಳೆ ಕೈಹಿಡಿದರೆ ಅದೃಷ್ಟ ಒಲಿಯುತ್ತದೆ. ಇಲ್ಲದಿದ್ದರೆ ಕೇಜಿಗೆ ಎರಡು ರೂಪಾಯಿಯಿಂದ ಐದು ರೂಪಾಯಿ ದರವಾಗಿ ರೋಡಿಗೆ ಸುರಿಯಬೇಕಾಗುತ್ತದೆ.
ಯಾವಾಗ ಬರುತ್ತದೆ. ಯಾವಾಗ ಕಡಿಮೆಯಾಗುತ್ತದೆ ಎಂದು ಯಾರಿಂದಲೂ ಊಹಿಸಲಾಗದುಟೊಮೊಟೊ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಬೆಳೆ ಮಾರುಕಟ್ಟೆಯಲ್ಲಿ ಅಡಿಕೆ ಬಂದಿದ್ದು ವಾರದಿಂದ 300 , 400 ,500,600 ಆಸು ಪಾಸಿನಲ್ಲಿ ಮಾರಾಟವಾಗುತ್ತಿದೆ. 15 ಕೆಜಿ ಟೊಮೆಟೊ ಬಾಕ್ಸ್ ದಿಢೀರನೆ 750 ರಿಂದ 800 ರೂ ಗೆ ಮಾರಾಟವಾಗುತ್ತಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ. ಟೊಮೊಟೊ ರೈತರಿಗೆ ಮೊಗದಲ್ಲಿ ಮಂದಹಾಸ ಮೂಡಿದೆ.
ಕೋಟ್ ೧
ಒಂದು ಬಾರಿ ಬೆಲೆ ಖುಷಿತದಿಂದ
ರೈತರು ಕಂಗಾಲು ಆಗುತ್ತಾರೆ. ಒಂದು ಬಾರಿ ಕೈ ಹಿಡಿದರೆ ಮತ್ತೊಂದು ಬಾರಿ ಕೈ ಬಿಡುತ್ತದೆ. ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
- ಲಿಂಗಪ್ಪ | ಟೊಮೊಟೊ ಬೆಳೆಗಾರ
ಕೋಟ್ ೨
ಮಾರುಕಟ್ಟೆಯಲ್ಲಿ ಟೊಮೇಟೊ ದರ
ಇನ್ನಷ್ಟು ಏರಿಕೆಯಾಗುವ ಸಂಭವವಿದೆ. ಟಮೊಟೊ 70 ರಿಂದ 80 ರೂಪಾಯಿ ಅಂದರೆ ಟೊಮೊಟೊ ತೆಗೆದುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಾರೆ.
- ಬಾಬುಜಾನ್ | ತರಕಾರಿ ವ್ಯಾಪಾರಿ
ಕೋಟ್೩
ಟೊಮೊಟೊ ಬೆಲೆ ಎಷ್ಟೇ ಏರಿಕೆಯಾದರೂ ತೆಗೆದುಕೊಳ್ಳಬೇಕು. ಏರಿಕೆಯಾಗಿದೆ ಎಂದು ಟೊಮೊಟೊ ತಿನ್ನದೇ ಇರುವುದು ಆಗುವುದಿಲ್ಲ. ಯಾವುದೇ ಸಾರು ಮತ್ತು ಅಡುಗೆಗೆ ಟೊಮೊಟೊ ಅತ್ಯವಶ್ಯಕವಾಗಿದೆ.
- ರಂಜಿತ | ಗ್ರಾಹಕಿ