ಬೆಂಗಳೂರು: ಬಿಗ್ ಬಾಸ್ 12ರ ವಿನ್ನರ್ ಗಿಲ್ಲಿ ನಟನಿಗೆ ವಿವಾದಗಳು ಬೆನ್ನುಹತ್ತಿಕೊಳ್ಳುತ್ತಿದ್ದು, ಸಿನಿಮಾ ನಿರ್ಮಾಪಕರೊಬ್ಬರು ಅವರ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಿಸಿದ್ದಾರೆ.
ಗಿಲ್ಲಿ ನಮ್ಮ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಅವರು ಕೇಳಿದಷ್ಟು ಸಂಭಾವನೆ ನೀಡಲಾಗಿದೆ. ಅವರು ಬಿಗ್ ಬಾಸ್‌ಗೆ ಹೋಗುವ ಮೊದಲೇ ಸಂಭಾವನೆ ನೀಡಲಾಗಿತ್ತು. ಆದರೆ, ಈಗ ಯಾವುದೇ ಪ್ರಮೋಷನ್‌ಗೆ ಬರುತ್ತಿಲ್ಲ ಎಂದು ನಿರ್ಮಾಪಕರು ದೂರಿದ್ದಾರೆ.
ಸರಕಾರಿ ಶಾಲೆ ಎಚ್8 ಎಂಬ ಸಿನಿಮಾದಲ್ಲಿ ಗಿಲ್ಲಿ ನಟ ಪ್ರಮುಖ ಪಾತ್ರ ನಿರ್ವಹಣೆ ಮಾಡಿದ್ದಾರೆ. ಆದರೆ, ಪ್ರಮೋಷನ್ ಮಾಡುತ್ತಿಲ್ಲ ಎಂಬುದು ನಿರ್ಮಾಪಕರ ಆರೋಪವಾಗಿದೆ. ಗಿಲ್ಲಿ ನಟ ಸಂಭಾವನೆ ಪಡೆದು ಯಾವುದೇ ಪ್ರಮೋಷನ್ ಮಾಡುತ್ತಿಲ್ಲ. ಕಾಲ್ ಮಾಡಿದರೆ ಫಿಕ್ ಮಾಡುವುದಿಲ್ಲ, ಸಿನಿಮಾ ಬಗ್ಗೆ ಒಂದು ಸಣ್ಣ ಪೋಸ್ಟ್ ಕೂಡ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

