ರಾಜಕೀಯ ಸುದ್ದಿ

ರೈತ ಮುಖಂಡರಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Share It

ನವಲಗುಂದ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟಗಾರರು ರೈತ ವೇದಿಕೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಕೃಷಿ ಸಚಿವರು, ಜಿಲ್ಲಾಧಿಕಾರಿಗೆ ರೈತರು ಮನವಿ ಸಲ್ಲಿಸಿದರು.

ರೈತ ಮುಖಂಡ ಸುಭಾಷಗೌಡ ಪಾಟೀಲ ಮಾತನಾಡಿ, ಮಹದಾಯಿ ಕಳಸಾ ಬಂಡೂರಿ ಯೋಜನೆಯನ್ನು ತೀವ್ರಗತಿಯಲ್ಲಿ ಕಾರ್ಯಾರಂಭಿಸಿ ಮಲಪ್ರಭೆಗೆ ನೀರು ಒದಗಿಸುವ ಕುರಿತು ತಕ್ಷಣವೇ ಸರ್ಕಾರ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ರೈತರು ಶೇ.50ರಷ್ಟು ರೈತರಿಗೆ ಇನ್ನೂ ಬೆಳೆ ಪರಿಹಾರ ಬಂದಿಲ್ಲ ಎಂದು ಆರೋಪಿಸಿದರು. ಇನ್ನು ಅಚ್ಚುಕಟ್ಟು ಪ್ರದೇಶದ ಮಲಪ್ರಭೆ ನೀರಾವರಿ ರೈತರಿಗೆ ಮಾರ್ಗ ಸೂಚಿ ಪ್ರಕಾರ ಪರಿಹಾರ ಹಣ ನೀರಾವರಿ ಎಂದು ಉತಾರದಲ್ಲಿ ನಮೂದಾಗಿದ್ದರೂ ಒಣ ಬೇಸಾಯದ ಪರಿಹಾರ ಹಣ ಬಂದಿದೆಹೀಗಾದರೆ ಹೇಗೆ ಎಂದು ಪ್ರಶ್ನಿಸಿ, ಮಾರ್ಗಸೂಚಿ ಪ್ರಕಾರ ಹಣ ನೀಡುವಂತೆ ಆಗ್ರಹಿಸಿದರು.

ನವಲಗುಂದ ತಾಲೂಕು ಇದ್ದರೂ ಕೂಡಾ ಹೋಬಳಿ ಹೊಂದಿರುವುದಿಲ್ಲ ಮತ್ತು ರೈತ ಸಂಪರ್ಕ ಕೇಂದ್ರ ಇಲ್ಲ. ನವಲಗುಂದ ಪಟ್ಟಣಕ್ಕೆ ರೈತ ಸಂಪರ್ಕ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು.

ಮಲಪ್ರಭಾ ಅಚ್ಚು ಕಟ್ಟು ಪ್ರದೇಶದಲ್ಲಿ 5 ವರ್ಷಗಳ ಹಾಗೆಯೇ ಉಪ ಕಾಲುವೆಗಳು ನಿರ್ಮಾಣಗೊಂಡಿದ್ದು, ಈಗ ಸಂಪೂರ್ಣ ನಾಶವಾಗಿವೆ. ಹೀಗಾಗಿ ತಕ್ಷಣವೇ ಉಪ ಕಾಲುವೆಗಳನ್ನು ಮರು ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.


Share It

You cannot copy content of this page