ಬೆಂಗಳೂರು: ಸಾರಿಗೆ ಒಕ್ಕೂಟದ ಪ್ರತಿಭಟನೆ ವೇಳೆ ಗದ್ದಲ ನಡೆದದ್ದು, ಕಚೇರಿಗೆ ನುಗ್ಗಿದ ಚಾಲಕರು ಪೀಠೋಪಕರಣ ದ್ವಂಸ ಮಾಡಿರುವ ಘಟನೆ ನಡೆದಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಸಾರಿಗೆ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಾರಿಗೆ ಆಯುಕ್ತರಿಗೆ ಮನವಿ ಮಾಡಲು ಕಾರ್ಯಕರ್ತರು ಮುಂದಾದರು. ಆದರೆ, ಪೊಲೀಸರು ಬಾಗಿಲಿನಲ್ಲೇ ತಡೆದರು.
ಈ ವೇಳೆ ಗೊಂದಲ ಉಂಟಾಗಿ ಕಚೇರಿಯೊಳಗೆ ನುಗ್ಗಿದ ಚಾಲಕರು ಮತ್ತು ಕಾರ್ಯಕರ್ತರು ಪೊಲೀಸರ ವಿರುದ್ಧ ವಾಗ್ವಾದಕ್ಕಿಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ರೊಚ್ಚಿಗೆದ್ದ ಕಾರ್ಯಕರ್ತರು ಕಚೇರಿಯ ಪೀಠೋಪಕರಣ ಗಳನ್ನೆ ದ್ವಂಸಗೊಳಿಸಿದ್ದಾರೆ. ಅನಂತರ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ವರದಿಯಾಗಿದೆ.