ಶಾಸಕರಿಗೆ ಲಂಚ ಕೊಡೋಕೆ ಪರ್ಸನಲ್ ಲೋನ್ ಪಡೆದಿದ್ದ ಪಿಎಸ್‌ಐ ಪರುಶುರಾಮ್?
ಯಾದಗಿರಿ: ಪೊಲೀಸ್ ಇಲಾಖೆಯಲ್ಲಿನ ಲಂಚಾವತಾರ ಎಷ್ಟಿದೆಯೆಂಬುದಕ್ಕೆ ಪಿಎಸ್‌ಐ ಪರುಶುರಾಮ್ ಸಾವಿನ ಪ್ರಕರಣ ಬಹುಮುಖ್ಯ ಉದಾಹರಣೆಯಾಗಿದ್ದು, ಶಾಸಕರ ಡಿಮ್ಯಾಂಡ್ ಪೂರೈಸಲು ಆತ ಬ್ಯಾಂಕ್‌ನಿAದ ಸಾಲ ಪಡೆದಿದ್ದ ಎನ್ನಲಾಗಿದೆ.
ಪಿಎಸ್‌ಐ ಪರುಶುರಾಮ್ ಅನುಮಾನಸ್ಪದ ಸಾವಿನ ಹಿನ್ನೆಲೆಯಲ್ಲಿ ಶಾಸಕ ಚನ್ನಾರೆಡ್ಡಿ ಮತ್ತು ಆತನ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಈ ನಡುವೆ ಆತನ ಸ್ನೇಹಿತನ ನೀಡಿರುವ ಮಾಹಿತಿಯ ಪ್ರಕಾರ, ಆತ ಲಂಚದ ಹಣವನ್ನು ಹೊಂದಿಸುವ ಸಲುವಾಗಿ ಬ್ಯಾಂಕ್‌ನಿAದ ವೈಯಕ್ತಿಕ ಸಾಲ ಪಡೆದಿದ್ದ ಎನ್ನಲಾಗಿದೆ.
ಶಾಸಕರಿಗೆ ಹಣ ಕೊಡಬೇಕು ಎಂಬ ಕಾರಣಕ್ಕೆ ಅಲ್ಲಿ ಇಲ್ಲಿ ಹಣ ಹೊಂದಾಣಿಕೆ ಮಾಡುತ್ತಿದ್ದ, ಈ ನಡುವೆ ಹಣ ಹೊಂದಾಣಿಕೆಯಾಗದೆ, ಬ್ಯಾಂಕ್ ನಿಂದ ಪರ್ಸನಲ್ ಲೋನ್ ಪಡೆದಿದ್ದಾನೆ. ಆತ ಹಣ ಹೊಂದಿಕೆಯಾಗದಿದ್ದಾಗ ನನ್ನ ಬಳಿ ಅಳಲು ತೋಡಿಕೊಂಡಿದ್ದ. ಶಾಸಕರ ವರ್ತನೆಯಿಂದ ರೋಸಿಹೋಗಿದ್ದ ಆತ ನನ್ನ ಜತೆ ಮಾತನಾಡಿರುವ ಆಡಿಯೋ ರೆಕಾರ್ಡ್ ಇದೆ ಎಂದು ಪರುಶುರಾಮ್ ಸ್ನೇಹಿತ ತಿಳಿಸಿದ್ದಾನೆ.
ನನ್ನ ಬಳಿಯಿರುವ ಆಡಿಯೋ ರೆಕಾರ್ಡ್ ಅನ್ನು ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡ್ತೇನಬೆ. ತನಿಖಾಧಿಕಾರಿಗಳು ಕೇಳಿದ್ರೆ ಕೊಡ್ತೇನೆ ಎಂದಿರುವ ಆತ, ಸರಕಾರ ಸೂಕ್ತ ತನಿಖೆ ನಡೆಸಿ, ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾನೆ. ಈ ನಡುವೆ ಆತನ ಪತ್ನಿಗೆ ಸರಕಾರಿ ಉದ್ಯೋಗ ನೀಡುವಂತೆ ಒತ್ತಾಯ ಕೇಳಿಬಂದಿದೆ.


