ಸಿಎಂ, ಡಿಸಿಎಂ ಜತೆಗೆ ರಾಹುಲ್ ಗಾಂಧಿ ಪ್ರತ್ಯೇಕ ರಹಸ್ಯ ಚರ್ಚೆ
ಬೆಂಗಳೂರು: ತಮಿಳುನಾಡಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ರಾಹುಲ್ ಗಾಂಧಿ, ಸಿಎಂ ಮತ್ತು ಡಿಸಿಎಂ ಜತೆಗೆ ವಿಮಾನ ನಿಲ್ದಾಣದಲ್ಲಿಯೇ ಪ್ರತ್ಯೇಕವಾಗಿ ಮಾತನ್ನಾಡಿದ್ದಾರೆ.
ರಾಹುಲ್ ಗಾಂಧಿಯವರನ್ನು ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಅನೇಕ ನಾಯಕರು ಮೈಸೂರು ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಈ ವೇಳೆ ಸ್ವಾಗತ ಸ್ವೀಕರಿಸಿದ ನಂತರ ಅವರು ಉಭಯ ನಾಯಕರ ಜತೆಗೆ ಪ್ರತ್ಯೇಕ ಚರ್ಚೆ ನಡೆಸಿದರು.
ಮೊದಲಿಗೆ ಸಿದ್ದರಾಮಯ್ಯ ಅವರ ಜತೆಗೆ ರಾಹುಲ್ ಗಾಂಧಿ ಎರಡು ನಿಮಿಷಗಳ ಕಾಲ ಮಾತುಕತೆ ನಡೆಸಿ, ಅನಂತರ ಡಿಕೆಶಿ ಜತೆಗೆ ಪ್ರತ್ಯೇಕವಾಗಿ ಮಾತನಾಡಿದು. ಅನಂತರ ಇಬ್ಬರು ನಾಯಕರನ್ನು ನಿಲ್ಲಿಸಿಕೊಂಡು ಮಾತನಾಡಿದರು.
ಇದೀಗ ರಾಹುಲ್ ಗಾಂಧಿ ಚರ್ಚೆ ನಡೆಸಿರುವುದು ವಿಪರೀತ ವೈರಲ್ ಆಗುತ್ತಿದ್ದು, ಡಿಕೆಶಿಗೆ ರಾಹುಲ್ ಗಾಂಧಿ ಅಭಯ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜತೆಗೆ ಶೀಘ್ರವೇ ದೆಹಲಿಗೆ ಕರೆಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂಭ ಮಾತುಗಳು ಕೇಳಿಬಂದಿವೆ.


