ಉಪಯುಕ್ತ ಸುದ್ದಿ

ದಾವಣಗೆರೆಯಲ್ಲಿ ಧರೆಗಿಳಿದ 2025 ರ ಮೊದಲ ಮಳೆ!

Share It

ದಾವಣಗೆರೆ: ಮಹಾನಗರದಲ್ಲಿ 2025 ರ ವರ್ಷದ ಮೊದಲ ಮಳೆ ಹನಿ‌ ಹನಿಯಾಗಿ ಇಂದು ಮಂಗಳವಾರ ಸಂಜೆ ಉದುರಿದೆ.

ಮಂಗಳವಾರ ಸಂಜೆ ಅಂದಾಜು 5:15 ರಿಂದ ಸುಮಾರು ಕೆಲವು ನಿಮಿಷಗಳವರೆಗೆ ಬೇಸಿಗೆ ಮಳೆಯ ಮೊದಲ ಹನಿಗಳು ದಾವಣಗೆರೆ ಮಹಾನಗರಕ್ಕೆ ಬಿದ್ದವು. ಇದರಿಂದ ನಗರದಲ್ಲಿ ಬಿರು ಬಿಸಿಲಿನ ಝಳ ಕಡಿಮೆಯಾಗಿ ಒಂದಿಷ್ಟು ತಂಪಾದ ವಾತಾವರಣ ಸೃಷ್ಟಿಯಾಯಿತು. ಆದರೆ ನಗರದ ರಸ್ತೆಗಳಲ್ಲಿ ಮೊದಲ ಮುಂಗಾರು ಪೂರ್ವ ಮಳೆಯ ಹನಿಗಳು ಬೇಗನೆ ಒಣಗಿವೆ.

ಕಾರಣ ಬಿಸಿಲಿನ ಬೇಗೆಯಿಂದ ದಾವಣಗೆರೆಯಲ್ಲಿ ಭೂಮಿ ಕಾದ ಹಂಚಾಗಿ ಪರಿಣಮಿಸಿತ್ತು. ಪರಿಣಾಮ ಬೇಸಿಗೆಯಲ್ಲಿ ಮೊದಲ ಮಳೆ ಹನಿಗಳಾಗಿ ಭೂಮಿಗಿಳಿದರೂ ಅದಾಗಲೇ ದಾವಣಗೆರೆಯಲ್ಲಿ ಕಾದ ದೋಸೆ ಹಂಚಿಗೆ ನೀರು ಚಿಮುಕಿಸಿದ ಹಾಗೆ ಬಹುಬೇಗನೆ ಮಳೆ ಹನಿಗಳು ಒಣಗಿವೆ.

ಹವಾಮಾನ ಇಲಾಖೆ ಪ್ರಕಾರ ಇಂದು ರಾತ್ರಿ ಕೊಂಚ ತಂಪಾದ ವಾತಾವರಣ ದಾವಣಗೆರೆಯಲ್ಲಿ ಇರಲಿದೆ. ಆದರೆ ನಾಳೆ ಬುಧವಾರ ದಾವಣಗೆರೆಯಲ್ಲಿ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ದೃಢಪಡಿಸಿಲ್ಲ.


Share It

You cannot copy content of this page