ಸುದ್ದಿ

ಕ್ಯಾತ್ಸಂದ್ರದ ದೊಡ್ಡಮ ದೇವಿಯ ಸನ್ನಿಧಿಗೆ ನುಗ್ಗಿದ ನೀರು

Share It

ತುಮಕೂರು : ನಗರದ ಕ್ಯಾಸಂದ್ರದಲ್ಲಿರುವ ದೊಡ್ಡಮ ದೇವಿ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು ಭಕ್ತರು ಪರದಾಡುವಂತಾಗಿದೆ. ಈಗಾಗಲೇ ಸಿದ್ದಗಂಗಾ ಮಠಕ್ಕೆ ನಿರ್ಮಿಸುತ್ತಿರುವ ಪ್ಲೇ ಓವರ್ ಕೆಳ ಭಾಗದಲ್ಲಿ ಚರಂಡಿ ಕಾರ್ಯ ಪೂರ್ಣಗೊಳ್ಳದಿರುವುದು ದೇವಸ್ಥಾನಕ್ಕೆ ನೀರು ಕಾರಣ ಎಂದು ದೇವಸ್ಥಾನದ ಆಡಳಿತ ಹೇಳಿದೆ.

ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ರಾಹುಲ್ ಯಜಮಾನ್ ಗಂಗಾಮಯ್ಯ ಮಾತನಾಡಿ, ಈಗಾಗಲೇ ಫ್ಲೇ ಓವರನ್ನು ಕೆಲಸ ಮುಗಿದು ಅನೇಕ ತಿಂಗಳಗಳಾಗಿವೆ. ಆದರೆ ಕೆಳಭಾಗದಲ್ಲಿ ಎರಡು ಕಡೆ ಚರಂಡಿಯನ್ನು ನಿರ್ಮಿಸುವ ಕಾರ್ಯ ಮಾತ್ರ ಇನ್ನು ಮುಗಿದಿಲ್ಲ. ಪ್ರತಿ ಬಾರಿ ಮಳೆ ಬಂದಾಗಲೂ ದೇವಸ್ಥಾನದ ಒಳಗೆ ನೀವು ನಗುತ್ತದೆ. ಇದರಿಂದ ದೇವಸ್ಥಾನದ ಸ್ವಚ್ಛತೆಗೆ ಕಷ್ಟಕವಾಗುತ್ತಿದೆ ಎಂದು ದೂರಿದ್ದಾರೆ.

ಇದರ ಸಲುವಾಗಿ ಅಧಿಕಾರಿಗಳ ಗಮನಕ್ಕೆ ತಂದರು ಕಾಮಗಾರಿಯನ್ನು ಪೂರ್ಣಗೊಂಡಿಲ್ಲ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮುಖಂಡರಾದ ಪಾಟೀಲ್ ಅರುಣ್, ಜಯಸಿಂಹ, ಚಿಕ್ಕ ರಂಗಯ್ಯ, ನಾರಾಯಣಪ್ಪ ಕೆ. ಟಿ. ಚಂದ್ರಯ್ಯ ಒತ್ತಾಯಿಸಿದ್ದಾರೆ.


Share It

You cannot copy content of this page