ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್: ಬಂಧಿತ ಉಗ್ರ ಮಾಜ್ ಮುನೀರ್ ಕೈವಾಡ ದೃಢ

Oplus_131072

Oplus_131072

Share It

ಬೆಂಗಳೂರು : ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರ ಮಾಜ್​ ಮುನೀರ್ ಕೈವಾಡವಿರುವುದು ಧೃಡವಾಗಿದೆ. 

ಶಂಕಿತ ಉಗ್ರ ಮಾಜ್​ ಮುನೀರ್ ಎನ್​ಐಎ ಕಸ್ಟಡಿಯಲ್ಲಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ​

ಕಳೆದ ಮಾರ್ಚ್​ 1 ರಂದು ರಾಮೇಶ್ವರಂ ಕೇಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಇದಾದ ಬೆನ್ನಲ್ಲೇ ಎನ್​ಐಎ ಅಧಿಕಾರಿಗಳು ಮಾರ್ಚ್​ 4ರ ರಾತ್ರಿ ಪರಪ್ಪನ ಅಗ್ರಹಾರ ಸೇರಿದಂತೆ ದೇಶದ 18 ಜೈಲುಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲಿಸಿದ್ದರು. ಈ ಸಮಯದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಶಂಕಿತ ಉಗ್ರ ಮಾಜ್​ ಮುನೀರ್​ನನ್ನು ಎನ್​ಐಎ ಅಧಿಕಾರಿಗಳು 8 ದಿನಗಳ ಕಾಲ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.

ಎನ್​ಐಎ ಅಧಿಕಾರಿಗಳು ಮಾಜ್ ಮುನೀರ್ ಇದ್ದ ಜೈಲು ಕೋಣೆಯನ್ನು ತಪಾಸಣೆ ನಡೆಸಿದಾಗ ನೋಟ್ ಬುಕ್ ಒಂದರಲ್ಲಿ ಕೆಲವು ಕೋಡ್ ವರ್ಡ್‌ ಬರೆಯಲಾಗಿತ್ತು. ಇವುಗಳನ್ನು ಡಿಕೋಡ್ ಮಾಡಿದಾಗ ಎನ್​ಐಎ ಅಧಿಕಾರಿಗಳಿಗೆ, ಕೆಫೆ ಸ್ಫೋಟ ಸಂಬಂಧ ಲಿಂಕ್ ಲಭ್ಯವಾಗಿತ್ತು. ಮಾಜ್ ಮುನೀರ್​ ಜೈಲಿನಲ್ಲಿದ್ದುಕೊಂಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದನು ಎಂಬುವುದು ಬಯಲಾಯಿತು.

ಮಾಜ್​ ಮುನೀರ್​ ವಿಚಾರಣೆ ನಡೆಸಿದಾಗ ಮುಜಾಮಿಲ್​ ಷರೀಫ್​ನ ಕೈವಾಡವಿರುವುದೂ ತಿಳಿಯಿತು. ಕೂಡಲೇ ಎನ್​ಐಎ ಅಧಿಕಾರಿಗಳು ಮುಜಾಮಿಲ್​ ಷರೀಫ್​ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಆಗ ಮುಜಾಮಿಲ್​ ಷರೀಫ್​ ಮಾಜ್​ ಮುನೀರ್​ ಕೈವಾಡದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದನು. ಬಳಿಕ ಎನ್​ಐಎ ಅಧಿಕಾರಿಗಳು ಮಾಜ್​ ಮುನೀರ್​ನನ್ನೂ ಬಂಧಿಸಿದರು.

ಮಾಜ್​ ಮುನೀರ್​ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. ಈತ ಎಂಜಿನಿಯರ್​ ಪದವಿಧರನಾಗಿದ್ದಾನೆ. ಈತನು ಕೆಲವು ವರ್ಷಗಳ ಹಿಂದೆ ನಡೆದ ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನು ಪಡೆದುಕೊಂಡು ಹೊರ ಬಂದಿದ್ದನು. ಅನಂತರ ಶಿವಮೊಗ್ಗ ಪ್ರಾಯೋಗಿಕ ಸ್ಫೋಟ ನಡೆಸಿದ್ದನು. ಈ ಪ್ರಕರಣದಲ್ಲಿ ಬಂಧಿಸಿದಾಗ ಐಸಿಸ್​ ಸಂಚು ಬಹಿರಂಗವಾಗಿದೆ.

2013ರಲ್ಲಿ ತೀರ್ಥಹಳ್ಳಿಯಲ್ಲಿ ಆರಂಭವಾಗಿದ್ದ ದಾವಾ ಸೆಂಟರ್​ಗೆ ಮಾಜ್ ಮುನೀರ್ ಹೋಗಿದ್ದರು. ದಾವಾ ಸೆಂಟರ್ ಹೆಸರಿನಲ್ಲಿ ವ್ಯಾಟ್ಸಾಪ್ ಗ್ರೂಪ್ ಕೂಡ ಆರಂಭಿಸಿದ್ದನು. ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಲು ಆಸಕ್ತನಾಗಿದ್ದ. ಮಾಜ್ 2016ರಲ್ಲಿ ಐಸಿಸ್ ಸಂಘಟನೆ ಸೇರಿಕೊಂಡಿದ್ದನು. ​2019ರಲ್ಲಿ CAA, NRC ವಿಚಾರವಾಗಿ ದೇಶದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆಗ ಮಾಜ್​ ಮುನೀರ್ Ummah News ಹೆಸರಿನಲ್ಲಿ ಟೆಲಿಗ್ರಾಂ ಗ್ರೂಪ್ ರಚಿಸಿದ್ದನು.


Share It

You cannot copy content of this page