ರಾಜಕೀಯ ಸುದ್ದಿ

GBA ಚುನಾವಣೆ: ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿ ರಾಮ್ ಮಾಧವ್ ನೇಮಕ

Share It

ಬೆಂಗಳೂರು: ಜಿಬಿಎ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ತನ್ನ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.

ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಿಸಿದ್ದು, ರಾಜಸ್ಥಾನದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷರಾದ ಸತೀಶ್ ಪುನಿಯಾ, ಮಹಾರಾಷ್ಟ್ರದ ಶಾಸಕ ಸಂಜಯ್ ಉಪಾಧ್ಯಾಯ ಸಹ ಉಸ್ತುವಾರಿ ಗಳಾಗಿ ನೇಮಕಗೊಂಡಿದ್ದಾರೆ.

ಈ ಆದೇಶವನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೊರಡಿಸಿದ್ದು, ಮುಂಬೈ ಮಾದರಿಯಲ್ಲಿ ಜಿಬಿಎ ಚುನಾವಣೆ ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಲಿದೆ.


Share It

You cannot copy content of this page