ರಾಜಕೀಯ ಸುದ್ದಿ

ಕಾಂಗ್ರೆಸ್ ಮಾಡಿದರೆ ತುಷ್ಟೀಕರಣ: ಮೋದಿ ಮಾಡಿದರೆ ಅದು ಮ್ಯಾಜಿಕ್ : ಇದ್ಯಾವ ಲಾಜಿಕ್

Share It

ಬೆಂಗಳೂರು: ಮೋದಿ 32 ಲಕ್ಷ ಮುಸ್ಲಿಮರಿಗೆ ಈದ್ ಕಿಟ್ ಕೊಡಲು ಘೋಷಣೆ ಮಾಡಿರುವುದರ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮೋದಿ ಮಾಡಿದರೆ ಮ್ಯಾಜಿಕ್, ಕಾಂಗ್ರೆಸ್ ಮಾಡಿದರೆ ತುಷ್ಟೀಕರಣ ಎನ್ನುತ್ತಾರೆ ಎಂದು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಕಾಂಗ್ರೆಸ್ ನವರು ಇದನ್ನು ಮಾಡಿದ್ದರೆ, ತುಷ್ಠೀಕರಣ ರಾಜಕಾರಣ, ಒಂದು ಸಮುದಾಯವನ್ನು ಮಾತ್ರ ಓಲೈಸುವ ರಾಜಕಾರಣವೆಂದು ಹೀಗೆಳೆಯುವ ಬಿ.ಜೆ.ಪಿ ಅವರನ್ನು ಕೇಳುತ್ತಿದ್ದೇವೆ, ಇದು ಓಲೈಕೆ ಅಲ್ಲವೇ? ಇದಕ್ಕೆ ಬೇರೆ ಏನಾದರೂ ಹೆಸರಿದೆಯೇ? ಎಂದು ಪ್ರಶ್ನಿಸಿದ್ದಾರೆ.

ದೇಶದ್ಯಾಂತ ಉಗಾದಿ ಹಬ್ಬವನ್ನು ರಂಜಾನ್ ಗೆ ಒಂದು ದಿನ‌ ಮೊದಲೇ ನಬ ವರ್ಷ ,ಬಿಹು, ವೈಶಾಖಿ, ಪನ ಸಂಕ್ರಾಂತಿ, ಗುಡಿ ಪಡವಾ, ಬೈಶಾಕ ಎಂಬ ಹೆಸರುಗಳಿಂದ ಹಬ್ಬವನ್ನು ಆಚರಿಸುತ್ತಿರುವ  ಹಿಂದೂಗಳ ಬಗ್ಗೆ ಮೋದಿ ಜೀ ಅವರಿಗೆ ಪ್ರೇಮ ಬರಲಿಲ್ವಾ?  ಕಾಂಗ್ರೆಸ್ ನವರು ಮಾಡಿದರೆ ಒಂದು ವ್ಯಾಖ್ಯಾನ, ಮೋದಿ ಜೀ ಅವರು ಮಾಡಿದರೆ ಮಾತ್ರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ವ್ಯಾಖ್ಯಾನವೇ? ಎಂದಿದ್ದಾರೆ.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ “ಸೌಗಾತ್-ಎ ಮೋದಿ” ಅಭಿಯಾನದ ಮೂಲಕ ಈದ್ ಗೆ ವಿತರಿಸುತ್ತಿರುವ ಕಿಟ್ ಗಳು ,ಹಿಂದೂ ಹಬ್ಬಕ್ಕೆ ಹಿಂದೂಗಳಿಗೆ ವಿತರಿಸಲು ಸಾಧ್ಯವಾಗದಿರುವುದಕ್ಕೆ? ಬಿಜೆಪಿ ಅವರ ಬಳಿ‌ ಉತ್ತರವಿದೆಯೇ? ಎಂದು ರಾಮಲಿಂಗಾ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.


Share It
<p>You cannot copy content of this page</p>