ಬೆಂಗಳೂರಿನಲ್ಲಿ ರೇವ್ ಪಾರ್ಟಿ: ಮತ್ತಿನಲ್ಲಿ ತೇಲಾಡಿದವರ ಅರೆಸ್ಟ್

Share It

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಎಲೆಕ್ಟಾçನಿಕ್ ಸಿಟಿ ಸಮೀಪ ರೆಸಾರ್ಟ್ವೊಂದರಲ್ಲಿ ಆಯೋಜನೆ ಮಾಡಿದ್ದ ರೇವ್ ಪಾರ್ಟಿಯಲ್ಲಿ ಸುಮಾರು ೨ ಗಂಟೆ ರಾತ್ರಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬ ಪಾರ್ಟಿ ಆಯೋಜನೆ ಮಾಡಿದ್ದ ಎನ್ನಲಾಗಿದೆ.

ತೆಲುಗು ನಟಿ ಹೇಮಾ ಸೇರಿ ಹಲವು ನಟ-ನಟಿಯರು ಭಾಗಿಯಾಗಿದ್ದರು ಎನ್ನಲಾಗಿದೆ. ದಾಳಿಯ ವೇಳೆ ಪೊಲೀಸರು ಚರಸ್ , ಗಾಂಜಾ, ೧೭ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಶಾಸಕ ಕಾಕನಿ ಗೋವರ್ಧನ ರೆಡ್ಡಿ ಅವರ ಹೆಸರಿನ ಪಾಸ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ಪಾರ್ಟಿ ಆಯೋಜಕ ಸೇರಿದಂತೆ ಹಲವರನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸಿದ್ದಾರೆ. ಮಾಧ್ಯಕ ವಸ್ತುಗಳ ಬಳಕೆಗೆ ಸಂಬAಧ ಎಫ್‌ಐಆರ್ ದಾಖಲು ಮಾಡಿದ್ದು, ಮುಂದಿನ ವಿಚಾರಣೆಗಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.


Share It

You May Have Missed

You cannot copy content of this page