ಅಂತ್ಯಸಂಸ್ಕಾರದ ವೇಳೆ ಪುನರ್ಜನ್ಮ: ಆಸ್ಪತ್ರೆಗೆ ಸಾಗಿಸುವಾಗ ಮರಣ
ರಾಮನಗರ: ಇದೊಂದು ಅಪರೂಪದ ಘಟನೆ. ಸಾವನ್ನಪ್ಪಿದ್ದಾನೆ ಎಂದು ತಿಳಿದು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾಗ ಆ ವ್ಯಕ್ತಿ ಮತ್ತೇ ಜೀವ ಪಡೆದಿದ್ದಾನೆ. ಆದರೆ, ಆ ಖುಷಿ ಕುಟುಂಬಸ್ಥರಿಗೆ ಹೆಚ್ಚು ಹೊತ್ತು ಸಿಕ್ಕಿಲ್ಲ.
ಇಂತಹ ಅಪರೂಪದ ಘಟನೆ ನಡೆದಿದ್ದು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನ ದೊಡ್ಡಿ ಗ್ರಾಮದಲ್ಲಿ ಮೃತಪಟ್ಟಿದ್ದ ವ್ಯಕ್ತಿ, ಶವಸಂಸ್ಕಾರದ ವೇಳೆಯಲ್ಲಿ ಪುನರ್ಜನ್ಮ ಪಡೆದು, ತದನಂತರ ಆಸ್ಪತ್ರೆಗೆ ಸಾಗಿಸುವಾಗ ಮರಳಿ ಮರಣ ಹೊಂದಿದ್ದಾನೆ. ಗ್ರಾಮದ ಕೂಲಿ ಕಾಮರ್ಿಕ ಶಿವರಾಮು (55) ಈ ರೀತಿಯ ಬೆಳವಣಿಗೆಗೆ ಕಾರಣವಾದ ವ್ಯಕ್ತಿ.
ಸೋಮವಾರ ಬೆಳಗ್ಗೆ 6:30ರ ಸುಮಾರಿಗೆ ಶಿವರಾಮು ಕುಸಿದು ಬಿದ್ದಿದ್ದಾರೆ. ಜನರು ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ವೈದ್ಯರು ತಪಾಸಣೆ ನಡೆಸಿ, ಶಿವರಾಮು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಶಿವರಾಮು ಮೃತಪಟ್ಟಿರುವ ಬಗ್ಗೆ ಸಂಬಂಧಿಕರಿಗೆ ಮಾಹಿತಿ ಮುಟ್ಟಿಸಿದ ಕುಟುಂಬಸ್ಥರು, ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು.
ಶವಸಂಸ್ಕಾರಕ್ಕೆ ಮೃತದೇಹವನ್ನು ಕೊಂಡೊಯ್ಯುವಾಗ ಶಿವರಾಮು ದೇಹದಿಂದ ಮತ್ತೆ ಉಸಿರಾಟದ ಸದ್ದು ಕೇಳಿಸಿದೆ. ಮತ್ತೆ ಜೀವ ಬಂದಿದ್ದರಿಂದ ಕುಟುಂಬಸ್ಥರು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ವೈದ್ಯರು, ಶಿವರಾಮುನನ್ನು ಪರೀಕ್ಷಿಸಿ ಹಾಟರ್್ ಅಟ್ಯಾಕ್ ಆಗುತ್ತಿದೆ, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಸೂಚಿಸಿದ್ದಾರೆ.
ವೈದ್ಯರ ಸಲಹೆಯಂತೆ ಕುಟುಂಬಸ್ಥರು ಶಿವರಾಮು ಅವರನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಗಮಧ್ಯೆ ಮತ್ತೆ ಜೀವ ಹೋಗಿದೆ.
ಶಿವರಾಮು ಮೃತದೇಹವನ್ನು ಮತ್ತೆ ಹುಚ್ಚಯ್ಯನದೊಡ್ಡಿಗೆ ತಂದ ಸಂಬಂಧಿಕರು, ಮತ್ತೆ ಜೀವ ಬರಬಹುದು ಎಂಬ ಅನುಮಾನದಿಂದ ಮನೆ ಬಳಿ ಕೆಲಹೊತ್ತು ಶವ ಇಟ್ಟಿದ್ದಾರೆ. ಆ ಬಳಿಕ ಸಂಬಂಧಿಕರೆಲ್ಲ ಸೇರಿ ಶವಸಂಸ್ಕಾರ ಮಾಡಿದ್ದಾರೆ.