ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಎ4 ಆರೋಪಿ ಚಿತ್ರದುರ್ಗದ ರಘು ಸದ್ಯ ಜೈಲಿನಲ್ಲಿ ಬಂಧಿತನಾಗಿದ್ದಾನೆ. ಇತ್ತ ಚಿತ್ರದುರ್ಗದ ಕೋಳಿ ಬುರುಜನಹಟ್ಟಿಯಲ್ಲಿರುವ ಮನೆಯಲ್ಲಿದ್ದ 70 ವರ್ಷದ ರಘು ತಾಯಿ ಮಂಜುಳಮ್ಮ ಕೊನೆಯುಸಿರೆಳೆದಿದ್ದಾರೆ.
ಅಲ್ಲಿಯವರೆಗೂ ರಘು ಜೈಲಿನಿಂದ ರಿಲೀಸ್ ಆಗಿ ವಾಪಸ್ ಮನೆಗೆ ಬರುತ್ತಾನೆ ಎಂದು ನಂಬಿದ್ದ ಮಂಜುಳಮ್ ಮಗನಿಗೆ ಬೇಲ್ ಸಿಗುವುದಿಲ್ಲ ಎಂದು ತಿಳಿದು ನೊಂದು ನೊಂದು ಇಹಲೋಕ ತ್ಯಜಿಸಿದ್ದಾರೆ. ಆದರೆ ಕಳೆದ ತಿಂಗಳು ಚೆನ್ನಾಗಿಯೇ ಇದ್ದ ಮಂಜುಳಮ್ಮ ತನ್ನ ನೆಚ್ಚಿನ ಮಗ ರಘು ಜೈಲು ಪಾಲಾದ ಎಂಬ ಸುದ್ದಿ ಕೇಳಿ ಸೊರಗಿ ಸೊರಗಿ ಅನಾರೋಗ್ಯಪೀಡಿತರಾಗಿದ್ದರು.
ಆದ್ದರಿಂದ ಸದ್ಯ ಜೈಲಿನಲ್ಲಿರುವ ರಘುನನ್ನು ಈಗಲಾದರೂ ಅಮ್ಮನ ಅಂತ್ಯಕ್ರಿಯೆಗೆ ಒಂದು ದಿನ ರಿಲೀಸ್ ಮಾಡಿ ಎಂದು ಪೊಲೀಸರನ್ನು ರಘು ಸಹೋದರಿ ಬೇಡಿಕೊಂಡಿದ್ದಾಳೆ.
ಚಿತ್ರದುರ್ಗ ಜಿಲ್ಲೆಯ ನಟ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದ ಬಂಧಿತ ರಘು ಇದೀಗ ಸಾವನ್ನಪ್ಪಿರುವ ನೆಚ್ಚಿನ ತಾಯಿಯನ್ನು ನೋಡಲು ಪೆರೋಲ್ ಮೇಲೆ ತಾತ್ಕಾಲಿಕವಾಗಿ ಒಂದು ದಿನವಾದರೂ ತನ್ನನ್ನು ಬಿಡುಗಡೆ ಮಾಡಿ ಎಂದು ಜೈಲಿನ ಅಧಿಕಾರಿಗಳನ್ನು ವಿನಂತಿಸಿಕೊಂಡಿದ್ದಾನೆ.