ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸಿನ A1 ಆರೋಪಿ ಪವಿತ್ರಾ ಗೌಡಗೆ ಸಿಕ್ತು ಕೈದಿ ನಂಬರ್

Share It

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿ ನಿನ್ನೆ ಕೋರ್ಟ್ ಆದೇಶದಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ಕಂ ಮಾಡೆಲ್ ಪವಿತ್ರಾ ಗೌಡಗೆ ಇಂದು ಖೈದಿ ನಂಬರ್ ನೀಡಲಾಗಿದೆ.

ಸದ್ಯ ಮಹಿಳಾ ಖೈದಿಗಳ D ಬ್ಯಾರಕ್ ನಲ್ಲಿರುವ A1 ಆರೋಪಿ ಪವಿತ್ರಾ ಗೌಡಗೆ ಇಂದು ವಿಚಾರಣಾಧೀನ ಕೈದಿ ಎಂದು ನಮೂದಿಸಿ ಕೈದಿ ನಂಬರ್ ನೀಡಿದ್ದಾರೆ. ಈವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ A1 ಆರೋಪಿ ಪವಿತ್ರಾ ಗೌಡ ನಿನ್ನೆ ಕೋರ್ಟ್ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿ ಬಂಧಿತರಾಗಿದ್ದಾರೆ. ಬೆಂಗಳೂರಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿರುವ ಪವಿತ್ರಾ ಗೌಡಗೆ ಜೈಲಾಧಿಕಾರಿಗಳು ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿ 6024/2024 ಎಂದು ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ. ಸದ್ಯ ಮಹಿಳಾ ವಿಭಾಗದ ಡಿ ಬ್ಯಾರಕ್ ನಲ್ಲಿ ಪವಿತ್ರಾ ಗೌಡಾಳನ್ನ ಇರಿಸಲಾಗಿದ್ದು, ಹೈಫೈ ಜೀವನ ಲೀಡ್ ಮಾಡಿದ್ದ ಪವಿತ್ರಾಗೆ ಜೈಲಿನಲ್ಲಿ ಬರೀ ಊಟಕ್ಕಾಗಿ ರಾಗಿಮುದ್ದೆ ಮುರಿಯೋ ಸ್ಥಿತಿ ಬಂದಿದೆ.

ಕಳೆದ ರಾತ್ರಿ ಸರಿಯಾದ ನಿದ್ರೆ ಮಾಡದ ಪವಿತ್ರಾ ಗೌಡ ಬೆಳಗ್ಗೆ 5 ಗಂಟೆಗೆ ಎದ್ದು ವಾಕಿಂಗ್ ಮಾಡಿದ್ದಾರೆ. ನಂತರ ಜೈಲಿನ ಸಿಬ್ಬಂದಿ ನೀಡಿದ ಕಾಫಿ‌ ಕುಡಿದು ನ್ಯೂಸ್ ಪೇಪರ್ ಓದಿದ್ದಾರೆ. ತದನಂತರ ಬೆಳಗ್ಗೆ ಉಪ್ಪಿಟ್ಟು ಉಪಾಹಾರ ಸೇವಿಸಿದ್ದಾರೆ. ಸದ್ಯ D ಬ್ಯಾರಕ್ ನಲ್ಲಿರುವ ವಿಚಾರಣಾಧೀನ ಕೈದಿ ನಂಬರ್ (UTP) 6024/2024 ಪವಿತ್ರಾ ಗೌಡ ಸದಾ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದಾರೆ.


Share It

You cannot copy content of this page