ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಡಿಎನ್ಎ ಟೆಸ್ಟ್ ಮಾಡಿಸಲು ಕರೆದುಕೊಂಡು ಹೋಗಿದ್ದಾರೆ ಎಂದು ವರದಿ ಆಗಿತ್ತು. ಈ ವಿಚಾರವನ್ನು ದರ್ಶನ್ ಪರ ವಕೀಲರು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.
ದರ್ಶನ್ ಪರ ವಕೀಲರು ಈ ಬಗ್ಗೆ ಹೇಳಿದ್ದಿಷ್ಟು…
“DNA ಟೆಸ್ಟ್ ಇದು ಗುಟ್ಟಾಗಿ ನಡೆಯುವ ಪ್ರಕ್ರಿಯೆ. ನ್ಯಾಯಾಲಯಕ್ಕೆ ಪೊಲೀಸರು ಕೇಸ್ ಡೈರಿ ಸಲ್ಲಿಕೆ ಮಾಡುತ್ತಾರೆ. ಅದು ತನಿಖೆಯ ದಿನಚರಿ. ಆರೋಪಿಗಾಗಲೀ, ವಕೀಲರಿಗಾಗಲೀ ಅದನ್ನು ತೆಗೆದುಕೊಳ್ಳೋ ಹಕ್ಕು ಇರಲ್ಲ. ಡಿಎನ್ಎ ಟೆಸ್ಟ್ ಮಾಡಿದ್ದಾರೋ ಅಥವಾ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ. ಚಾರ್ಜ್ಶೀಟ್ ಸಲ್ಲಿಕೆ ಆದಮೇಲೆ ಮಾತ್ರ ಆ ಬಗ್ಗೆ ಗೊತ್ತಾಗೋದು. ಸರ್ವೋಚ್ಛ ನ್ಯಾಯಾಲಯ ಒಂದು ಆದೇಶ ಕೊಟ್ಟಿದೆ. ಇದರ ಪ್ರಕಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಮ್ಮತಿ ಪಡೆದೇ ಡಿಎನ್ಎ ಟೆಸ್ಟ್ ಮಾಡಿಸಬೇಕು’ ಎಂದಿದ್ದಾರೆ ದರ್ಶನ್ ಪರ ವಕೀಲರು.
ಹಾಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರಿಗೆ DNA ಟೆಸ್ಟ್ ಮಾಡಿಸಿದರಷ್ಟೇ ಸತ್ಯ ಬಯಲಿಗೆ ಬೀಳಲಿದೆ.

