ಬೆಂಗಳೂರು: ಆಳಿತಾತ್ಮಕ ಹಿತದೃಷ್ಟಿಯಿಂದ ಬಿಬಿಎಂಪಿಯಲ್ಲಿ ಅನೇಕ ಅಧಿಕಾರಿಗಳ ಸ್ಥಾನಪಲ್ಲಟ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಬಿಬಿಎಂಪಿ ಆಡಳಿತ ವಿಭಾಗದ ಆಯುಕ್ತರಾಗಿ ನವೀನ್ ಕುಮಾರ್ ರಾಜು ಅವರಿಗೆ ಹೊಣೆಗಾರಿಕೆ ನೀಡಿದ್ದರೆ, ಪ್ರೇಜೆಕ್ಟ್ ವಿಶೇಷ ಆಯುಕ್ತರಾಗಿ ಅವಿನಾಶ್ ಮೆನನ್ ಅವರನ್ನು ನೇಮಿಸಲಾಗಿದೆ. ಶಿಕ್ಷಣ ವಿಭಾಗದ ಆಯುಕ್ತರಾಗಿ ಸೂರಲ್ಕಲ್ ವಿಕಾಸ್ ಕಿಶೋರ್ ಅವರನ್ನು ನೇಮಿಸಲಾಗಿದೆ. ಅವರು ಈ ಹಿಂದೆ ಆರೋಗ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.