ಸುದ್ದಿ

ಬಿಜೆಪಿ ಬುರುಡೆ ಜನರ ಪಾರ್ಟಿ : ಮೋದಿ, ಶಾ ಅವರ ಪ್ರಿನ್ಸಿಪಾಲ್ : ರಾಮಲಿಂಗಾ ರೆಡ್ಡಿ ಕಿಡಿ

Share It

ಬೆಂಗಳೂರು: ಬಿಜೆಪಿಯಲ್ಲಿ ಬರೀ ಸುಳ್ಳು ಹೇಳುವ ಜನರೇ ತುಂಬಿದ್ದು, ಬಿಜೆಪಿ ಎಂದರೆ ಬುರುಡೆ ಜನರ ಪಾರ್ಟಿ. ಮೋದಿ ಮತ್ತು ಶಾ ಅವರ ಪ್ರಿನ್ಸಿಪಾಲ್ ಎಂದು ಸಾರಿಗೆ ಮತ್ತು ಮುಜಫರ್ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದರು.

ಖಾಸಗಿ ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ಪ್ರಯತ್ನವನ್ನು ಸರಕಾರ ನಡೆಸುತ್ತಿದೆ ಎಂದು ಸುಳ್ಳು ಹರಡುತ್ತಿರುವ ಬಿಜೆಪಿ ನಾಯಕರು, ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸುಳ್ಳು ಹೇಳುವುದನ್ನೇ ಬಿಜೆಪಿ ನಾಯಕರು ಛಾಳಿ ಮಾಡಿಕೊಂಡಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಗುಡುಗಿದರು.

ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಇದ್ದಂತೆ. ಇಲ್ಲಿ ಸುಳ್ಳನ್ನು ಸೃಷ್ಟಿಸಿ ಹರಡುವ ಪ್ರಯತ್ನ ನಡೆಸಲಾಗುತ್ತದೆ. ಇಂತಹ ಸುಳ್ಳಿನ ಫ್ಯಾಕ್ಟರಿಗೆ ಮೋದಿ ಮತ್ತು ಅಮಿತ್ ಶಾ ಅವರೇ ಪ್ರಿನ್ಸಿಪಾಲ್ ಇದ್ದಂತೆ. ಅವರ ನೇತೃತ್ವದಲ್ಲಿಯೇ ಬಿಜೆಪಿಗರು ಸುಳ್ಳಿನ ಕೋಟೆ ಕಟ್ಟುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟ ವಿಷಯ. ಈ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯೇ ನನ್ನ ಹೇಳಿಕೆ. ಈ ಬಗ್ಗೆ ಗೊಂದಲ ಸೃಷ್ಟಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಈ ಕುರಿತು ಯಾವುದೇ ಗೊಂದಲದಲ್ಲಿಲ್ಲ ಎಂದು ರೆಡ್ಡಿ ಗುಡುಗಿದರು.


Share It

You cannot copy content of this page