ಕ್ರೀಡೆ ಸುದ್ದಿ

WTC ಮತ್ತು ಚಾಂಪಿಯನ್ಸ್ ಟ್ರೋಫಿಗೆ ರೋಹಿತ್ ನಾಯಕ : ಜಯ ಶಾ

Share It

ಟಿ 20 ವಿಶ್ವ ಕಪ್ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮ ತನ್ನ ಟಿ 20 ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ಮೂಡಿಸಿದ್ದರು. ಈದೀಗ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು, 2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನೆಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ನೆಡೆಸುವ ಜವಾಬ್ದಾರಿಯನ್ನು ಪಾಕಿಸ್ತಾನ ವಹಿಸಿಕೊಂಡಿದೆ. ಹಾಗಾಗಿ ಟೀಮ್ ಇಂಡಿಯಾ ಮುಂಬರುವ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿ ಹೋಗಿ ಆಡುತ್ತದೆ ಎಂದು ಇನ್ನೂ ಖಚಿತವಾಗಿಲ್ಲ .

ಬಳಿಕ ಅದೇ ವರ್ಷ ಜೂನ್ ತಿಂಗಳಲ್ಲಿ ನೆಡೆಯಲಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಅನ್ನು ಇಂಗ್ಲೆಂಡ್ ನ ಲಾರ್ಡ್ ಸ್ಟೇಡಿಯಂನಲ್ಲಿ ಆಡಲಿದೆ. ಆದ್ದರಿಂದ ಇವೆರಡೂ ಐಸಿಸಿ ಟೂರ್ನಮೆಂಟ್ ನಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಅವರೇ ನಾಯಕನಾಗಿ ಮುನ್ನೆಡೆಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದ್ದಾರೆ.

ಈಗಾಗಲೇ ಟಿ 20 ವಿಶ್ವ ಕಪ್ ಅನ್ನು ಎತ್ತಿ ಇಡಿದಿರುವ ಭಾರತ, ಚಾಂಪಿಯನ್ಸ್ ಟ್ರೋಫಿ ಮತ್ತು ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ (WTC) ನಲ್ಲಿ ಮತ್ತೆರಡು ಕಪ್ ಗಳು ಟೀಮ್ ಇಂಡಿಯಕ್ಕೆ ಸಿಗಲಿವೆ ಎಂದು ಜಯ ಶಾ ಭಾನುವಾರ ತಿಳಿಸಿದ್ದಾರೆ.


Share It

You cannot copy content of this page