ಬೌಲಿಂಗ್ ಮಾಡಲು ಸರಿಯಾದ ರನ್ ಅಪ್ ತೆಗೆದುಕೊಳ್ಳುವಲ್ಲಿ ಪದೇಪದೇ ತಪ್ಪು ಮಾಡಿದ ವಾಷಿಂಗ್ಟನ್ ಸುಂದರ್ ಅವರನ್ನು ರೋಹಿತ್ ಹೊಡೆಯಲು ಹೋದ ವೀಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮ ಅನೇಕ ಸಂಧರ್ಭಗಳಲ್ಲಿ ಮೈದಾನದಲ್ಲಿ ಕೋಪ ಗೊಳ್ಳುವುದನ್ನು ನೋಡಿದ್ದೇವೆ. ಆಟಗಾರರು ಮಾಡುವ ಸಣ್ಣ ಸಣ್ಣ ತಪ್ಪುಗಳಿಗೆ ರೋಹಿತ್ ಹಾಸ್ಯದ ಮೂಲಕ ಮೈದಾನದಲ್ಲೇ ಉತ್ತರ ಕೊಟ್ಟುಬಿಡುತ್ತಾರೆ.
ಇಂತಹದ್ದೆ ಒಂದು ಘಟನೆ ಇಂದು ನೆಡೆಯುತ್ತಿರುವ ಭಾರತ-ಶ್ರೀಲಂಕಾ ಪಂದ್ಯದ ಮಧ್ಯೆ ನೆಡೆಯಿತು. ಶ್ರೀಲಂಕಾ ಬ್ಯಾಟಿಂಗ್ ಇದ್ದಾಗ 33 ನೇ ಓವರ್ ಎಸೆಯಲು ಬಂದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡಲು ಸರಿಯಾದ ರನ್ ಅಪ್ ತೆಗೆದುಕೊಳ್ಳುವಲ್ಲಿ ಪದೇ ಪದೇ ತಪ್ಪು ಮಾಡಿದರು.
ಆಗ ಕ್ಯಾಪ್ಟನ್ ರೋಹಿತ್ ಶರ್ಮಾ ತಮಾಷೆಯಾಗಿ ಹೊಡೆಯಲು ಹೋದಾಗ ಇತರ ಆಟಗಾರರೊಂದಿಗೆ ಸುಂದರ್ ಕೂಡ ನಕ್ಕರು. ಈಗ ಇದೇ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.