ಕ್ರೀಡೆ ಸುದ್ದಿ

ಲಂಕಾದ ಸ್ಪಿನ್ ದಾಳಿಗೆ ತತ್ತರಿಸಿದ ರೋಹಿತ್ ಪಡೆ !

Share It

ಕೊಲಂಬೋ (ಶ್ರೀಲಂಕಾ) : ಭಾನುವಾರ ಆರ್ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 240 ರನ್ ಗಳನ್ನು ಬೆನ್ನತ್ತಲು ಮುಗ್ಗರಿಸಿದ ಭಾರತ ಲಂಕಾದ ಸ್ಪಿನ್ ದಾಳಿಗೆ ಆಲ್ ಔಟ್ ಆಗಿ 32 ರನ್ ಗಳಿಂದ ಹೀನಾಯ ಸೋಲನ್ನು ಅನುಭವಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾಕ್ಕೆ ಇನ್ನಿಂಗ್ಸ್ ನ ಮೊದಲ ಬಾಲ್ ನಲ್ಲಿಯೇ ಸಿರಾಜ್ ಅಘಾತ ನೀಡಿದರು. ಬಳಿಕ ಅವಿಷ್ಕಾ ಫರ್ನಾಂಡೋ 62 ಬಾಲ್ ಗಳಲ್ಲಿ ೪೦ ರನ್ ಮತ್ತು ಕುಶಾಲ್ ಮೆಂಡಿಸ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದಂತಹ ದುನಿತ್ ವೆಲ್ಲಲಿಗೆ 39 ರನ್ ಮತ್ತು ಕಮಿಂದು ಮೆಂಡಿಸ್ 40 ರನ್ ಬಾರಿಸುವುದರ ಮೂಲಕ 50 ಓವರ್ ಗಳಲ್ಲಿ ಭಾರತಕ್ಕೆ 240 ರನ್ ಗಳ ಟಾರ್ಗೆಟ್ ನೀಡಿದರು.

ಭಾರತದ ಪರ ಬೌಲ್ ಮಾಡಿದ ವಾಷಿಂಗ್ಟನ್ ಸುಂದರ್ 3 ವಿಕೆಟ್, ಕುಲ್ದೀಪ್ ಯಾದವ್ 2 ವಿಕೆಟ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದು ಲಂಕಾವನ್ನು 240 ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಾದರು.

ಎರಡನೇ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಹಾಗೂ ನಾಯಕ ರೋಹಿತ್ ಶರ್ಮ ಉತ್ತಮ ಜೊತೆಯಾಟ ಆಡಿದರು.ರೋಹಿತ್ ಶರ್ಮ 44 ಬಾಲ್ ಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸೇರಿ 68 ರನ್ ಗಳ ಅರ್ಧ ಶತಕ ಸಿಡಿಸಿ ಮಿಂಚಿದರು. ನಂತರ ಶುಭ್ಮನ್ ಗಿಲ್ 35 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಮೈದಾನಕ್ಕಿಳಿದ ಕೊಹ್ಲಿ, ರಾಹುಲ್, ಶಿವಂ ದುಬೆ, ಶ್ರೇಯಸ್ ಐಯ್ಯರ್, ಜೆಫ್ರೆ ವೆಂಡರ್ಸೆ ಅವರ ಸ್ಪಿನ್ ದಾಳಿಗೆ ತತ್ತರಿಸದರು. ಬಳಿಕ ಬಂದ ಅಕ್ಷರ್ ಪಟೇಲ್ 44 ಬಾಲ್ ಗಳಲ್ಲಿ 44 ರನ್ ಗಳಿಸಿ ಏಕಾಂಗಿ ಹೋರಾಟವಾಡಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಲಂಕಾ ಪರ ಬೌಲ್ ಮಾಡಿದ ಜೆಫ್ರೆ ವೆಂಡರ್ಸೆ ಟೀಮ್ ಇಂಡಿಯಾದ ಟಾಪ್ ಆರು ಬ್ಯಾಟ್ಸಮನ್ ಗಳನ್ನು ಔಟ್ ಮಾಡಿ ದಾಖಲೆ ನಿರ್ಮಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜೀನರಾದರು. ನಾಯಕ ಅಸಲಂಕಾ ೩ ವಿಕೆಟ್ ಪಡೆದು ಮಿಂಚಿದರು. ಬಳಿಕ ಟೀಮ್ ಇಂಡಿಯಾ ಶ್ರೀಲಂಕಾದ ಸ್ಪಿನ್ ದಾಳಿಗೆ ತತ್ತರಿಸಿದ ಭಾರತ 240 ಟಾರ್ಗೆಟ್ ಬೆನ್ನತ್ತಲು ವಿಫಲವಾಗಿ 42.2 ಓವರ್ ಗಳಲ್ಲಿ ಆಲ್ ಔಟ್ ಆಗಿ ಸೋಲನ್ನು ಅನುಭವಿಸಿತು.


Share It

You cannot copy content of this page