ಬೆಂಗಳೂರು : ಭಾರತದ ಅತಿ ದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ತನ್ನ ಅತಿದೊಡ್ಡ ಬೇಸಿಗೆ ಮಾರಾಟ ಮೇಳವಾದ ‘ಫ್ಯಾಬ್ ಗ್ರಾಬ್ ಫೆಸ್ಟ್’ ಅನ್ನು ಘೋಷಿಸಿದೆ.
ಈ ಫೆಸ್ಟ್ ಮೂಲಕ ಕಂಪನಿಯು Samsung.com, ಸ್ಯಾಮ್‌ಸಂಗ್ ಶಾಪ್ ಆಪ್ ಹಾಗೂ ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಮಳಿಗೆಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಅದ್ಭುತ ಆಫರ್ ಗಳು ಮತ್ತು ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್‌ಗಳನ್ನು ನೀಡುತ್ತದೆ.
‘ಫ್ಯಾಬ್ ಗ್ರಾಬ್ ಫೆಸ್ಟ್’ ಸಮಯದಲ್ಲಿ, ಗ್ರಾಹಕರು ಗ್ಯಾಲಕ್ಸಿ ಎಸ್ ಸರಣಿ, ಗ್ಯಾಲಕ್ಸಿ ಝಡ್ ಸರಣಿ ಮತ್ತು ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್‌ಗಳ ಆಯ್ದ ಮಾದರಿಗಳ ಮೇಲೆ 64% ವರೆಗೆ ರಿಯಾಯಿತಿ ಪಡೆಯಬಹುದು. ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳ ಆಯ್ಕೆ ಮಾಡೆಲ್‌ಗಳು, ಆಕ್ಸೆಸರೀಸ್ ಮತ್ತು ವೇರೇಬಲ್ಸ್ ಉತ್ಪನ್ನಗಳ ಮೇಲೆ 77%ರಷ್ಟು ರಿಯಾಯಿತಿ ನೀಡಲಾಗಿದೆ. ಗ್ಯಾಲಕ್ಸಿ ಬುಕ್4 ಸರಣಿಯ ಲ್ಯಾಪ್‌ಟಾಪ್‌ಗಳ ಆಯ್ದ ಮಾದರಿಗಳ ಖರೀದಿಯ ಮೇಲೆ ಗ್ರಾಹಕರು 24%ವರೆಗೆ ರಿಯಾಯಿತಿಗಳನ್ನು ಪಡೆಯಬಹುದು.
ಪ್ರಮುಖ ನಿಯೋ-ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್‌ಇಡಿ, ಒಎಲ್‌ಇಡಿ, ದಿ ಫ್ರೇಮ್ ಟಿವಿಗಳು ಮತ್ತು ಕ್ರಿಸ್ಟಲ್ ಯುಹೆಚ್‌ಡಿ ಸರಣಿಯಂತಹ ಸ್ಯಾಮ್‌ಸಂಗ್ ಟಿವಿಗಳ ಆಯ್ಕೆ ಮಾಡೆಲ್‌ಗಳು 43% ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ ಮತ್ತು ಓಎಲ್ಇಡಿ ಟಿವಿಗಳ ಆಯ್ದ ಮಾಡೆಲ್‌ಗಳ ಖರೀದಿಯ ಮೇಲೆ ಗ್ರಾಹಕರು 20 ಸಾವಿರ ರೂ.ವರೆಗೆ ಬ್ಯಾಂಕ್ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದೆಲ್ಲದರ ಜೊತೆಗೆ, ಗ್ರಾಹಕರು ಎಲ್ಲಾ ಟಿವಿಗಳ ಖರೀದಿಯಲ್ಲಿ 5 ಸಾವಿರ ರೂ.ವರೆಗೆ ಎಕ್ಸ್ ಚೇಂಜ್ ಬೋನಸ್‌ನಂತೆ ಪ್ರಯೋಜನಗಳನ್ನು ಪಡೆಯಬಹುದು.
‘ಫ್ಯಾಬ್ ಗ್ರಾಬ್ ಫೆಸ್ಟ್’ 2024ರಲ್ಲಿ ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು, ಮೈಕ್ರೋವೇವ್‌ಗಳು, ಮಾನಿಟರ್‌ಗಳು ಮತ್ತು ಏರ್ ಕಂಡಿಷನರ್‌ಗಳಂತಹ ಡಿಜಿಟಲ್ ಉಪಕರಣಗಳನ್ನು ಕಡಿಮೆ ಬೆಲೆ ಮತ್ತು ಹೆಚ್ಚು ರಿಯಾಯಿತಿಯಲ್ಲಿ ಪಡೆಯಬಹುದು.
ನಮ್ಮ ‘ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ’ ವೇದಿಕೆಯನ್ನು ಬಳಸಿಕೊಂಡು ಗ್ರಾಹಕರು Samsung.com ಅಥವಾ ಸ್ಯಾಮ್ ಸಂಗ್ ಶಾಪ್ ಆಪ್ ಮೂಲಕ 2 ಅಥವಾ ಹೆಚ್ಚಿನ ಉತ್ಪನ್ನಗಳನ್ನು ಖರೀದಿಸಿದರೆ ಹೆಚ್ಚುವರಿ 5% ಉಳಿತಾಯ ಮಾಡಬಹುದಾಗಿದೆ. ‘ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ’ ಪ್ಲಾಟ್‌ಫಾರ್ಮ್ ಗ್ರಾಹಕರಿಗೆ ಸ್ಯಾಮ್‌ಸಂಗ್ ಉತ್ಪನ್ನಗಳ ಮೇಲೆ ಹೆಚ್ಚು ಆಫರ್ ಗಳನ್ನು ಪಡೆಯುವ ಅವಕಾಶ ಒದಗಿಸುತ್ತದೆ.
ಜೊತೆಗೆ ಗ್ರಾಹಕರು ಸೈಡ್-ಬೈ-ಸೈಡ್ ರೆಫ್ರಿಜರೇಟರ್‌ಗಳು, ಚಂದದ ಫ್ರೆಂಚ್-ಡೋರ್ ರೆಫ್ರಿಜರೇಟರ್‌ಗಳು ಮತ್ತು ಫ್ರಾಸ್ಟ್ ಫ್ರೀ ರೆಫ್ರಿಜರೇಟರ್‌ಗಳಂತಹ ವ್ಯಾಪಕ ಶ್ರೇಣಿಯ ಪ್ರೀಮಿಯಂ ಉಪಕರಣಗಳ ಮೇಲೆ 48%ವರೆಗೆ ರಿಯಾಯಿತಿ ಪಡೆಯಬಹುದು. ಬೀಸ್ಪೋಕ್ ಎಐ ಪ್ಯಾಕೇಜ್‌ನ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಆಯ್ದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗ್ರಾಹಕರು ತಮ್ಮ ಅಡುಗೆ ಮನೆಯನ್ನು ಅದ್ಭುತವಾಗಿ ರೂಪಾಂತರಿಸಬಹುದು ಮತ್ತು ಅದಕ್ಕಾಗಿ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು.
ವಾಷಿಂಗ್ ಮೆಷಿನ್‌ಗಳ ಆಯ್ದ ಮಾದರಿಗಳು 50%ವರೆಗಿನ ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಸಂಪೂರ್ಣ ಅಟೋಮ್ಯಾಟಿಕ್ ಫ್ರಂಟ್ ಲೋಡಿಂಗ್ ಮತ್ತು ಸಂಪೂರ್ಣ ಅಟೋಮ್ಯಾಟಿಕ್ ಟಾಪ್ ಲೋಡಿಂಗ್ ಯಂತ್ರಗಳ ಡಿಜಿಟಲ್ ಇನ್ವರ್ಟರ್ ಮೋಟಾರ್‌ಗೆ 20 ವರ್ಷದ ವಾರಂಟಿ ಲಭ್ಯವಿರುತ್ತದೆ. ಈ ಉತ್ಪನ್ನಗಳ ಸುಲಭ ಖರೀದಿಗೆ ಕೈಗೆಟುಕುವ ಇಎಂಐ ಆಯ್ಕೆ ಕೂಡ ಲಭ್ಯವಿದ್ದು, ಸಂಪೂರ್ಣ ಅಟೋಮ್ಯಾಟಿಕ್ ಫ್ರಂಟ್ ಲೋಡಿಂಗ್ ವಾಷಿಂಗ್ ಮೆಷಿನ್ ಕೇವಲ 1490 ರೂ., ಸಂಪೂರ್ಣ ಅಟೋಮ್ಯಾಟಿಕ್ ಟಾಪ್ ಲೋಡಿಂಗ್ 990 ರೂ. ಮತ್ತು ಸೆಮಿ-ಅಟೋಮ್ಯಾಟಿಕ್ ವಾಷಿಂಗ್ ಯಂತ್ರಗಳು 756 ರೂ. ಇಎಂಐಗೆ ಲಭ್ಯವಿದೆ.
ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಡಿ2ಸಿ ಬಿಸಿನೆಸ್‌ನ ಉಪಾಧ್ಯಕ್ಷ ಸುಮಿತ್ ವಾಲಿಯಾ, “Samsung.com ಮತ್ತು ಸ್ಯಾಮ್ ಸಂಗ್ ಮಳಿಗೆಗಳಲ್ಲಿ ಬಹು ನಿರೀಕ್ಷಿತ ಬೇಸಿಗೆ ಮಾರಾಟ ಮೇಳ ಆರಂಭಿಸಲು ನಾವು ಸಂತೋಷ ಹೊಂದಿದ್ದೇವೆ. ಫ್ಯಾಬ್ ಗ್ರಾಬ್ ಫೆಸ್ಟ್ ಮೂಲಕ ನಾವು ನಮ್ಮ ಗ್ರಾಹಕರಿಗೆ ಉತ್ತಮ ಆಫರ್ ಗಳು ಮತ್ತು ರಿಯಾಯಿತಿಗಳನ್ನು ಕೊಡಲಿದ್ದೇವೆ. ಈ ಫ್ಯಾಬ್ ಗ್ರಾಬ್ ಫೆಸ್ಟ್ ನಲ್ಲಿ ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ ಎಂಬ ಯೋಜನೆ ಅಳವಡಿಕೆಯ ಮೂಲಕ ಸ್ಯಾಮ್‌ಸಂಗ್ ಶ್ರೇಣಿಗಳ ಹೆಚ್ಚು ಉತ್ಪನ್ನಗಳನ್ನು ಖರೀದಿಸುವ ನಮ್ಮ ಗ್ರಾಹಕರಿಗೆ ಹೆಚ್ಚುವರಿ 5% ರಿಯಾಯಿತಿಯನ್ನೂ ನೀಡಲಿದ್ದೇವೆ. ಗ್ರಾಹಕರ ಸಂತಸವನ್ನು ಹೆಚ್ಚಿಸುವ ಜೊತೆಗೆ, ಆಯ್ದ ಮಾಡೆಲ್‌ಗಳನ್ನು ನಾವು ಅದೇ ದಿನ ಡೆಲಿವರಿ ನೀಡಲಿದ್ದೇವೆ” ಎಂದು ಹೇಳಿದರು.
ಮಾನಿಟರ್‌ಗಳ ಆಯ್ದ ಮಾದರಿಗಳು 61%ವರೆಗಿನ ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಗ್ರಾಹಕರು ಸ್ಮಾರ್ಟ್ ಮತ್ತು ಗೇಮಿಂಗ್ ಮಾನಿಟರ್‌ಗಳ ಆಯ್ದ ಮಾದರಿಗಳ ಖರೀದಿಯ ಮೇಲೆ ಉಚಿತ ವಾಲ್ ಮೌಂಟ್ ಅನ್ನು ಕೂಡ ಪಡೆಯಬಹುದು. ಸ್ಯಾಮ್ ಸಂಗ್ ತನ್ನ ಎಲ್ಲಾ ಮಾನಿಟರ್‌ಗಳ ಮೇಲೆ 3 ವರ್ಷಗಳ ವಾರಂಟಿ ಮತ್ತು 20% ಬ್ಯಾಂಕ್ ಕ್ಯಾಶ್‌ಬ್ಯಾಕ್ (10 ಸಾವಿರ ರೂ.ವರೆಗೆ) ನೀಡುತ್ತದೆ.
ಕನ್ವರ್ಟಿಬಲ್ ಮತ್ತು ವಿಂಡ್ ಫ್ರೀTM ಎಸಿಗಳ ಆಯ್ದ ಮಾದರಿಗಳು 47% ವರೆಗಿನ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. 2 ಅಥವಾ ಹೆಚ್ಚು ವಿಂಡ್ ಫ್ರೀTM ಏಸಿ ಮಾದರಿಗಳನ್ನು ಖರೀದಿಸುವಾಗ ಗ್ರಾಹಕರು ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು. ವಿಶೇಷವೆಂದರೆ, ಪಿಸಿಬಿ ವಿಭಾಗದಲ್ಲಿ ಈ ಮಾದರಿಗಳು ವಿಸ್ತೃತ ವಾರಂಟಿಯೊಂದಿಗೆ ಬರುತ್ತವೆ. 1 ವರ್ಷದ ಸ್ಟಾಂಡರ್ಡ್ ವಾರಂಟಿ ಜೊತೆಗೆ ಹೆಚ್ಚುವರಿ 4 ವರ್ಷದ ವಿಸ್ತೃತ ವಾರಂಟಿಯನ್ನು ಗ್ರಾಹಕರು ಪಡೆಯಬಹುದು.
ಅತ್ಯಾಕರ್ಷಕ ಬ್ಯಾಂಕ್ ಕೊಡುಗೆಗಳು ಕೂಡ ಲಭ್ಯವಿದೆ. ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಇತರ ಪ್ರಮುಖ ಸಂಸ್ಥೆಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿದರೆ ಗರಿಷ್ಠ 25 ಸಾವಿರ ರೂ.ವರೆಗಿನ ಕ್ಯಾಶ್‌ಬ್ಯಾಕ್ ಪಡೆಯಬಹುದು ಮತ್ತು ಆ ಮೂಲಕ 22.5% ವರೆಗೆ ಉಳಿತಾಯವನ್ನು ಅನುಭವಿಸಬಹುದು ಎಂದು ಹೇಳಿದ್ದಾರೆ.