ಎಸ್‌ಬಿಐನಿಂದ ನಡೆದಿದೆಯಾ ಮೋಸ: ಬ್ಯಾಂಕ್‌ನಿಂದ ನಕಲಿ ಚಿನ್ನ ವಾಪಸ್ ಆರೋಪ
ಬೆಂಗಳೂರು:ಎಸ್‌ಬಿಐ ಬ್ಯಾಂಕ್‌ನಲ್ಲಿಟ್ಟಿದ್ದ ಚಿನ್ನವನ್ನು ವಾಪಸ್ ಪಡೆದ ದಂಪತಿ, ಅದು ನಕಲಿ ಎಂದು ಆರೋಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಾಲಕ್ಷಿö್ಮ ಲೇಔಟ್ ಎಸ್‌ಬಿಐ ಶಾಖೆಯಲ್ಲಿ ದಂಪತಿ ಚಿನ್ನವನ್ನು ಅಡವಿಟ್ಟಿದ್ದರು. ಚಿನ್ನದ ಮೇಲೆ ಒಂದು ವರ್ಷದ ಹಿಂದೆಯೇ ೨ ಲಕ್ಷ ರು. ಸಾಲ ಪಡೆದಿದ್ದರು. ಈ ಹಣಕ್ಕೆ ಬಡ್ಡಿ ಮತ್ತು ಅಸಲು ಸೇರಿ, ೧೧,೭೮೫ ರು ಪ್ರತಿ ತಿಂಗಳು ಪಾವತಿ ಮಾಡುತ್ತಿದ್ದರು ಎನ್ನಲಾಗಿದೆ.
ಇದೀಗ ನೆನ್ನೆಯಷ್ಟೇ ಬಾಕಿ ಎಲ್ಲ ಹಣವನ್ನು ಪಾವತಿಸಿ, ಚಿನ್ನವನ್ನು ಬಿಡಿಸಿಕೊಂಡು ಬಂದಿದ್ದರು. ಅನಂತರ ಖಾಸಗಿ ಗಿರವಿ ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ, ಬ್ಯಾಂಕ್ ತಮಗೆ ನೀಡಿರುವುದು ನಕಲಿ ಚಿನ್ನ ಎಂದು ಗೊತ್ತಾಗಿದೆ ಎಂದು ದಂಪತಿ ಆರೋಪಿಸಿದ್ದಾರೆ.


