ಅಪರಾಧ ಸುದ್ದಿ

ಶಾಲಾ ಬಸ್ ಚಾಲಕನ ಯಡವಟ್ಟು : ನಾಲ್ಕು ವರ್ಷದ ಬಾಲಕ ಸಾವು

Share It

ಕಲಬುರಗಿ: ಶಾಲಾ ಬಸ್ ಚಾಲಕನ ನಿರ್ಲಕ್ಷö್ಯದಿಂದಾಗಿ ನಾಲ್ಕು ವರ್ಷದ ಬಾಲ ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕ ಪುನೀತ್ ಮೃತಪಟ್ಟಿರುವ ದುರ್ದೈವಿ ಎನ್ನಲಾಗಿದೆ. ಬಾಲಕ ಶಾಲೆಯಿಂದ ಮನೆಗೆ ಮರಳಿ ಬಸ್‌ನಿಂದ ಇಳಿದು ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ಬಸ್ ಮುಂದಕ್ಕೆ ಚಲಿಸುತ್ತದೆ ಎಂಬ ನಂಬಿಕೆಯಲ್ಲಿ ಮನೆಗೆ ಬಸ್ ಹಿಂದಿನಿAದ ಬಾಲಕ ತೆರಳು ಮುಂದಾಗಿದ್ದು, ವಾಹನ ಚಾಲಕ ಬಸ್ ಅನ್ನು ರಿವರ್ಸ್ ತೆಗೆದಿದ್ದಾನೆ. ಆಗ ಬಾಲಕ ಬಸ್ ನ ಹಿಂದಿನ ಚಕ್ರಕ್ಕೆ ಸಿಲುಕಿದ್ದಾನೆ. ಆದರೆ, ಬಸ್ ಚಾಲಕ ಅದನ್ನು ಗಮನಿಸದೆ ಬಾಲಕನ ಮೇಲೆಯೇ ಬಸ್ ಹರಿಸಿದ್ದಾನೆ ಎನ್ನಲಾಗಿದೆ.

ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಚಾಲಕ ಮತ್ತು ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರರಕಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


Share It

You cannot copy content of this page