ಅಪರಾಧ ಸಿನಿಮಾ ಸುದ್ದಿ

ಹೆಂಡತಿ-ಮಗನ ಕಂಡು ಕಣ್ಣೀರಿಟ್ಟನಾ ದಾಸ !

Share It

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಭೇಟಿಗೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಆಗಮಿಸಿದ್ದು, ಆ ವೇಳೆ ದರ್ಶನ್ ಕಣ್ಣೀರಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿಯನ್ನು ಕಿಡ್ನಾಪ್ ಮಾಡಿ, ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಎ-೨ ಎಂದು ಪರಿಗಣಿಸಿ, ಪೊಲೀಸರು ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಜೈಲು ಸೇರಿದ ಮರುದಿನವೇ ಅವರ ಭೇಟಿಗೆ ಬಂದ ಅವರ ಪತ್ನಿ ವಿಜಯಲಕ್ಷಿö್ಮ, ಪುತ್ರನನ್ನು ಕೂಡ ತಮ್ಮ ಜತೆ ಕರೆತಂದಿದ್ದರು.

ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಮಾಡಿದ ನಂತರ ವಿಜಯಲಕ್ಷಿö್ಮ ಅವರು ಮೌನಕ್ಕೆ ಶರಣಾಗಿದ್ದರು. ಅನಂತರ ಅವರನ್ನು ಪ್ರಕರಣದಿಂದ ಹೊರತರುವ ಪ್ರಯತ್ನ ನಡೆಸುತ್ತಿದ್ದಾರೆ. ಹಿರಿಯ ವಕೀಲರ ಜತೆಗೆ ಮಾತುಕತೆ ನಡೆಸಿ ಜಾಮೀನು ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಅವರು ಜೈಲಿಗೆ ಆಗಮಿಸಿ, ತಮ್ಮ ಪತಿಯ ಜತೆಗೆ ಮಾತುಕತೆ ನಡೆಸಿದ್ದಾರೆ.

ವಿಜಯಲಕ್ಷ್ಮಿ ಬೇಟಿ ವೇಳೆ ದರ್ಶನ್ ತಮ್ಮ ಪುತ್ರನನ್ನು ಕಂಡು ತಬ್ಬಿಕೊಂಡು ಅತ್ತಿದ್ದಾರೆ. ತಮ್ಮಿಂದಾದ ತಪ್ಪಿಗೆ ತಮ್ಮ ಮಗ ಮತ್ತು ಮಡದಿ ಕಷ್ಟಪಡುವುದನ್ನು ಕಂಡು ದರ್ಶನ್ ಕಣ್ಣೀರಾಗಿದ್ದಾರೆ ಎಂದು ಹೇಳಲಾಗಿದೆ. ವಿಜಯಲಕ್ಷಿö್ಮ ಅವರು ದರ್ಶನ್ ಅವರನ್ನು ಸಮಾಧಾನಪಡಿಸಿದ್ದು, ಮುಂದಿನ ಕಾನೂನು ಹೋರಾಟದಲ್ಲಿ ತಮ್ಮ ಜತೆಗಿರುವ ಭರವಸೆ ನೀಡಿದ್ದಾರೆ. ಪಾಪಪ್ರಜ್ಞೆಯಿಂದ ದರ್ಶನ್ ಬಳಲಿದ್ದು, ವಿಜಯಲಕ್ಷಿö್ಮ ಅವರ ಮುಂದೆ ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗಿದೆ.


Share It

You cannot copy content of this page