ತುಮಕೂರು : ಜಿಲ್ಲಾ ಪಂಚಾಯತ್ ಗ್ರಾಮೀಣ ಕೈಗಾರಿಕಾ ವಿಭಾಗದ ವತಿಯಿಂದ ಜಿಲ್ಲಾ ಉದ್ಯೋಗ ಕೇಂದ್ರ ಯೋಜನೆಯಡಿ ಬಂಡವಾಳ ಹೂಡಿಕೆ ಸಹಾಯಧನ ಹಾಗೂ ಬ್ಯಾಂಕ್ ಸಾಲಕ್ಕಾಗಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ ವೃತ್ತಿ ನಿರತ ಗ್ರಾಮೀಣ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಡಗಿ, ಕ್ಷೌರಿಕ, ದೋಬಿ, ಕಲ್ಲುಕುಟುಕ, ಗಾರೆ, ಕಮ್ಮಾರಿಕೆ, ಬುಟ್ಟಿ ಹೆಣೆಯುವುದು, ಕಸೂತಿ (ಜರಿ ಕೆಲಸ), ಕರಕುಶಲ ವಸ್ತು ತಯಾರಿಸುವ (ಹ್ಯಾಂಡಿಕ್ರಾಫ್ಟ್) ಕುಶಲಕರ್ಮಿಗಳಿಗೆ ಯೋಜನಾ ವೆಚ್ಚದ ಗರಿಷ್ಠ ಮೊತ್ತ 30,000 ರೂ. ಹಾಗೂ ಯೋಜನಾ ವೆಚ್ಚದ ಶೇ.೬೦ರಷ್ಟು ಗರಿಷ್ಠ 10,000 ರೂ.ಗಳ ಸಹಾಯಧನ ನೀಡಲಾಗುವುದು. ಅಲ್ಲದೆ ಬಡಗಿ, ಕ್ಷೌರಿಕ, ದೋಬಿ, ಕಲ್ಲುಕುಟುಕ ಗಾರೆ, ಕಮ್ಮಾರಿಕೆ ಕಸುಬಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣಗಳನ್ನು ವಿತರಿಸಲಾಗುವುದು.
ಅರ್ಹ ವೃತ್ತಿ ನಿರತ ಕುಶಲಕರ್ಮಿಗಳು ನಿಗಧಿತ ಅರ್ಜಿ ನಮೂನೆಯನ್ನು ಜಾಲತಾಣ https://sevasindhuservices.karnataka.gov.in/directApply.do?serviceld=1835 ಅಥವಾ https://zptumakuru.karnataka.gov.in/en ಮೂಲಕ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜುಲೈ 31 ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು(ಗ್ರಾ.ಕೈ) ಜಿಲ್ಲಾ ಕೈಗಾರಿಕಾ ಕೇಂದ್ರ, ಬಿ.ಹೆಚ್, ರೋಡ್, ತುಮಕೂರು ಅಥವಾ 0816-2955208 / 228120 ಅನ್ನು ಸಂಪರ್ಕಿಸಬೇಕೆಂದು ಉಪನಿರ್ದೇಶಕರು(ಗ್ರಾ.ಕೈ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.