ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಅಭಿನಂದನೆ
ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರ ಭವನದಲ್ಲಿ ಇಂದು ಸಂಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಹಾಗೂ ಕೇಂದ್ರದ ಸಣ್ಣ ಅತಿಸಣ್ಣ ಹಾಗೂ ಮಧ್ಯಮ ಮತ್ತು ಕಾರ್ಮಿಕ ಇಲಾಖೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿಕೂಟದ ನಾಯಕರು ಹಾಗೂ ಕಾರ್ಯಕರ್ತರು ಅಭಿನಂದನಾಸಮಾರಂಭ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಗೂ ನೇತೃತ್ವವನ್ನು ಸ್ಥಳೀಯ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ವಹಿಸಿದ್ದು, ಎರಡು ಪಕ್ಷಗಳ ಮುಖಂಡರು ಕಾರ್ಯಕರ್ತರು ಪಾಲ್ಗೊಂಡು ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿ ವಿಜಯೋತ್ಸವ ಆಚರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೋಪಾಲಯ್ಯ ಅವರು ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ನಮ್ಮ ಕ್ಷೇತ್ರದ ಕಡೆಯಿಂದ ಚುನಾವಣೆಯಲ್ಲಿ ಅತೀ ಹೆಚ್ಚು ಮತ ಲೀಡ್ ಕೊಟ್ಟಿದ್ದೇವೆ, ಕಳೆದ 10 ವರ್ಷಗಳಲ್ಲಿ ಮಾಡಿದ ಕೆಲಸಗಳ ರೀತಿ ಇವತ್ತಿನ ಸರ್ಕಾರದ 1 ನಯಾ ಪೈಸೆ ಕೊಟ್ಟಿಲ್ಲ. ಇವತ್ತಿನ ಪೆಟ್ರೋಲ್ ಡೀಸೆಲ್ ದರ ಏರಿಸಿದಕ್ಕೆ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡುವುದಕ್ಕಾಗಿ ಬೆಲೆ ಏರಿಸಿದ್ದೇವೆ ಎಂದು ಹೇಳಿದೆ ಇದು ಹಾಸ್ಯಾಸ್ಪದ ಎಂದ ಗೋಪಾಲಯ್ಯ ಅವರು ನಮ್ಮ ಕ್ಷೇತ್ರದಲ್ಲಿ ಪಾರ್ಕ್ ನೋಡಿಕೊಳ್ಳುವುದು, ನಮ್ಮ ಕ್ಲಿನಿಕ್ ಸಿಬ್ಬಂದಿಗೆ ಇನ್ನೂ ಸಂಬಳ ನೀಡಿಲ್ಲ.
ಎಲ್ಲ ಅತ್ಯವಶ್ಯಕ ವಸ್ತುಗಳ ಮೇಲೆ ಈಗಾಗಲೇ ಬೆಲೆ ಏರಿಕೆ ಮಾಡಿರುವುದು ಕಾಂಗ್ರೆಸ್ ಪಕ್ಷದ 1 ವರ್ಷದ.ಸಾಧನೆ ಎಂದು ವ್ಯಂಗ್ಯವಾಡಿದರು
ಕೆಂಪೇಗೌಡರ ಆಶಯದಂತೆ ಬೆಂಗಳೂರು ಒಟ್ಟಾಗಿರಬೇಕು ಎಂದ ಶಾಸಕರು ಬೆಂಗಳೂರು ನಗರ ವಿಭಜನೆಗೆ ವಿರೋಧ ವ್ಯಕ್ತಪಡಿಸಿದರು. ಇಂದು ಮತ್ತೊಮ್ಮೆ ನರೇಂದ್ರ ಮೋದಿಯವರು 3 ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಅದ್ರಲ್ಲಿ ನಮ್ಮ ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕಾರ್ಮಿಕ ಅತಿ ಸಣ್ಣ ಮಧ್ಯಮ ಇಲಾಖೆ ಸಚಿವೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದ ಮತದಾರರು ಹಾಗೂ ನಾಯಕರು ಸಚಿವರಾದ ಶೋಭಾ ಕರಂದ್ಲಾಜೆ ಅವರ ಬಳಿ ಬಂದಾಗ ಅವರ ಕೆಲಸ ಮಾಡಿಕೊಡಬೇಕಾಗಿ ಸಚಿವರಿಗೆ ಮನವಿ ಮಾಡಿದರು.
ಮುಂಬರುವ ಚುನಾವಣೆಗಳಲ್ಲಿ ಎಲ್ಲ ರೀತಿಯ ಶ್ರಮ ಹಾಗೂ ಸಂಘಟನೆ ಮಾಡುತ್ತಾ ಎಲ್ಲ ಚುನಾವಣೆಗಳಲ್ಲಿ ಗೆಲ್ಲಿವದಕ್ಕೆ ಶ್ರಮಿಸೋಣ ಎಂದು ಗೋಪಾಲಯ್ಯ ಹೇಳಿದ್ರು. ನನಗೆ ತುಮಕೂರು ಲೋಕಸಭಾ ಕ್ಷೇತ್ರದ ಜವಾಬ್ದಾರಿ ನೀಡಿದ್ದರು ಅಲ್ಲಿ ನಾನು ಕೆಲಸ ಮಾಡುವ ಮೂಲಕ ಅವರಿಗೂ ಕೇಂದ್ರದಲ್ಲಿ ಸಚಿವರಾಗಿದ್ದಾರೆ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರತಿದೆ.
ಶೋಭಾ ಕರಂದ್ಲಾಜೆ ಮಾತನಾಡಿ 32 ದಿನಗಳಲ್ಲಿ ನಾವು ಚುನಾವಣೆ ಮಾಡಿದ್ದೇವೆ, ಇಷ್ಟು ಕಡಿಮೆ ಸಮಯದಲ್ಲಿ ಚುನಾವಣೆ ಎದುರಿಸಿ ಇವತ್ತು ನಮಗೆ ಅತೀ ದೊಡ್ಡ ಗೆಲುವು ತಂದುಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದ ಜನರಿಗೆ ಮುಖಂಡರಿಗೆ ಕಾರ್ಯಕರ್ತರಿಗೆ ಶಿರಬಾಗಿ ನಮಿಸುತ್ತೇನೆ ಎಂದು ಹೇಳಿದರು.
ಇವತ್ತು ಇಷ್ಟು ದೊಡ್ಡ ನನ್ನ ಗೆಲುವಿಗೆ ಸ್ಥಳೀಯ ಶಾಸಕರು ಗೋಪಾಲಯ್ಯ ರವರ ಅಭಿವೃದ್ಧಿ ಕಾರಣ ಎಂದು ಹೇಳಿದ ಶೋಭಾ ಅವರು ರಾಷ್ಟ್ರ ಮಟ್ಟದಲ್ಲಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಸೀಟು ಬರಲಿಲ್ಲ. ಆದ್ರೆ ಜನರ ಆಶೀರ್ವಾದ್ ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರ ಮಾಡುತ್ತಿದ್ದಾರೆ. ಬೇರೆ ಬೇರೆ ಕಾರಣಕ್ಕೆ ಬಿಬಿಎಂಪಿ ಚುನಾವಣೆ ಆಗಿಲ್ಲ,ಆದಷ್ಟು ಬೇಗ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರ ಹಿಡಿಯಬೇಕು ಎಂದು ಹೇಳಿದರು.
ಅಸಲಿ ಮತದಾರರು ಇಲ್ಲಿ ಇರುವುದು ಆದ್ರೇ ಕಾಂಗ್ರೇಸ್ ಪಕ್ಷದವರು ನಕಲಿ ಮತದಾರರನ್ನು ಸೃಷ್ಟಿ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬರುವ ಬಿಬಿಎಂಪಿ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರ್ಡಗಳಲ್ಲಿ ಗೆದ್ದು ಬರಲಿ ನಾನು ನಿಮ್ಮ ಜೊತೆ ಜೊತೆಗೆ ಎಲ್ಲ ಸಂದರ್ಭಗಳಲ್ಲಿಇರುತ್ತೇ ಹೇಳಿದರು ನೆ ಎಂದು ಶೋಭಾಕರಂದ್ಲಾಜೆ
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಹರೀಶ್, ಉಪಾಧ್ಯಕ್ಷ ಎನ್ ಜಯರಾಂ,ಮಾಜಿ ಶಾಸಕರಾದ ನರೇಂದ್ರಬಾಬು, ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್, ಎಂ, ಮಹದೇವ,ಪದ್ಮಾವತಿ ಶ್ರೀನಿವಾಸ್,ನಾಗರತ್ನ ಲೋಕೇಶ್, ಜೆಡಿಎಸ್ ಪಕ್ಷದ ಅಧ್ಯಕ್ಷ ರಾದ ಚಂದ್ರೇಗೌಡ, ಬದ್ರೇಗೌಡ, ನಾರಾಯಣಸ್ವಾಮಿ, ಶ್ರೀನಿವಾಸ್, ಬಾಬಿ ಶಿವಕುಮಾರ್, ಬಿಜೆಪಿಯ ರಾಘವೇಂದ್ರ ನಾಗರಾಜ್, ಶಿವಾನಂದ ಮೂರ್ತಿ, ಎನ್ ವೆಂಕಟೇಶ್, ವೆಂಕಟೇಶ್ ಮೂರ್ತಿ, ಡಾಬಾ ಶ್ರೀನಿವಾಸ್,ರಾಘವೇಂದ್ರ ಭಟ್, ನಾರಾಯಣಸ್ವಾಮಿ, ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.