ಕ್ರೀಡೆ ರಾಜಕೀಯ ಸುದ್ದಿ

ಮಹಿಳಾ ಕ್ರೀಡಾಪಟು ಆಶಾ ಮಾಳವೀಯ ಅವರ 28 ರಾಜ್ಯಗಳ ಸೈಕಲ್ ಯಾತ್ರೆಗೆ ಸಿದ್ದರಾಮಯ್ಯ ಶುಭ

Share It

ಬೆಂಗಳೂರು: ದೇಶದ ಹೆಮ್ಮೆಯ ಪರ್ವತಾರೋಹಿ ಹಾಗೂ ರಾಷ್ಟ್ರಮಟ್ಟದ ಮಹಿಳಾ ಕ್ರೀಡಾಪಟು ಆಶಾ ಮಾಳವೀಯ ಅವರ ಸಾಧನೆಗೆ ಮತ್ತು ಇವರು ಹಮ್ಮಿಕೊಂಡಿರುವ 28 ರಾಜ್ಯಗಳ ಸೈಕಲ್ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಸಿದರು.

ಪರ್ವತಾರೋಹಿಯಾಗಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಮಧ್ಯಪ್ರದೇಶದ ಯುವತಿ ಆಶಾ ಮಾಳವೀಯ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸ್ತ್ರೀ ಸಬಲೀಕರಣ ಹಾಗೂ ಸ್ತ್ರೀ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ದೇಶದ 28 ರಾಜ್ಯಗಳನ್ನು ಒಳಗೊಂಡಂತೆ ಒಟ್ಟು 25,000 ಕಿ.ಮೀ ಸೈಕಲ್‌ ಯಾತ್ರೆ ನಡೆಸುತ್ತಾ ಅದರ ಭಾಗವಾಗಿ ಕರ್ನಾಟಕಕ್ಕೆ ಬಂದಿರುವುದನ್ನು ವಿವರಿಸಿದರು.

ತಮ್ಮ ಜಾಗೃತಿ ಅಭಿಯಾನದ ಭಾಗವಾಗಿ ಇಂದು ಬೆಂಗಳೂರಿಗೆ ಆಗಮಿಸಿದ ಆಶಾ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಆಶಾ ಅವರ ಸಾಧನೆಯನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಅಭಿಯಾನದ ಉದ್ದೇಶವನ್ನು ಮನಸ್ಪೂರ್ತಿಯಾಗಿ ಶ್ಲಾಘಿಸಿದ ಮುಖ್ಯಮಂತ್ರಿಗಳು ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್ ಅವರು ಉಪಸ್ಥಿತರಿದ್ದು ಆಶಾ ಮಾಳವೀಯ ಅವರಿಗೆ ಅಭಿನಂದಿಸಿದರು.


Share It

You cannot copy content of this page