ಸರಕಾರಿ ಶಾಲೆಯಲ್ಲಿ ಓದಿ ಸಿದ್ದರಾಮಯ್ಯ ಎರಡು ಬಾರಿ ಸಿಎಂ; ಆದ್ರೆ ಡಿಕೆಶಿಗೆ ಕಾನ್ವೆಂಟ್ ಲಿಂಕಿದೆ ಎಂದ ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಸರಕಾರಿ ಶಾಲೆಯಲ್ಲಿ ಓದಿದ ಸಿದ್ದರಾಮಯ್ಯ ಎರಡು ಬಾರಿ ರಾಜ್ಯದ ಸಿಎಂ ಆಗಿದ್ದಾರೆ. ಆದರೆ, ಡಿಕೆಶಿಗೆ ಕಾನ್ವೆಂಟ್ ಲಿಂಕ್ ಇದೆ. ಹೀಗಾಗಿ ಇನ್ನೂ ಸಿಎಂ ಆಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಕಲಬುರಗಿಯ ಸರಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕು ಎಂದು ಸಲಹೆ ನೀಡುವ ಸಲುವಾಗಿ, ಸರಕಾರಿ ಶಾಲೆಯಲ್ಲಿ ಓದಿದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ಹೇಳಿದರು. ಇದೇ ವೇಳೆ ಡಿಕೆಶಿಗೆ ಕಾನ್ವೆಂಟ್ ಲಿಂಕ್ ಇದೆ. ಹೀಗಾಗಿ, ಇನ್ನೂ ಸಿಎಂ ಆಗಿಲ್ಲ ಎಂಟು ಚಟಾಕಿ ಹಾರಿಸಿದರು.
ಡಿಕೆಶಿ ಬೆಂಗಳೂರಿನಿAದ ಮಲ್ಲಿಕಾರ್ಜುನ ಖರ್ಗೆ ಅವರ ಜತೆಯಲ್ಲಿಯೇ ಕಲಬುರಗಿಗೆ ತೆರಳಿದ್ದರು. ವಿಮಾನ ನಿಲ್ದಾಣದವರೆಗೆ ಕಾರಿನಲ್ಲಿ ಮತ್ತು ಅನಂತರ ವಿಶೇಷ ವಿಮಾನದಲ್ಲಿಒ ಕಲಬುರಗಿಗೆ ಖರ್ಗೆ ಮತ್ತು ಡಿಕೆಶಿ ಜತೆಯಾಗಿ ಸಾಗಿದ್ದರು.


