ಗಾಯಕ ಮ್ಯೂಸಿಕ್ ಮೈಲಾರಿ ಮತ್ತು ಏಳು ಜನರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Share It

ಬೆಳಗಾವಿ: ಉತ್ತರ ಕರ್ನಾಟಕ ಖ್ಯಾಯ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಮತ್ತು ಏಳು ಜನರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ.

ಡಿ.೧೪ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯೊಬ್ಬಳು ದೂರು ನೀಡಿದ್ದಳು. ಆ ದೂರನ್ನು ಡಿ.೧೫ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಪ್ರಕರಣದಲ್ಲಿ ಮ್ಯೂಸಿಕ್ ಮೈಲಾರಿ ಮತ್ತು ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಹನುಮ ಜಯಂತಿ ಕಾರ್ಯಕ್ರಮವೊಂದರಲ್ಲಿ ಆರ್ಕೆಸ್ಟಾç ಮಾಡಲು ಬಂದಿದ್ದ ಮ್ಯೂಸಿಕ್ ಮೈಲಾರಿ, ನೃತ್ಯ ಮಾಡಲು ಬಂದಿದ್ದ ಅಪ್ರಾಪ್ತೆಯನ್ನು ಚಿಕ್ಕೋಡಿಯ ಲಾಡ್ಜ್ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿ, ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಬಾಗಲಕೋಟೆ ಜಿಲ್ಲೆಯ ಗಾಯಕ ಮ್ಯೂಸಿಕ್ ಮೈಲಾರಿ ಇತ್ತೀಚೆಗೆ ಬಹಳ ಫೇಮಸ್ ಆಗಿದ್ದರು. ಬಾಗಲಕೋಟೆ ಬಸ್ ಸ್ಟಾಂಡ್‌ನಾಗ ಎಂಬ ಹಾಡು ಬಹಳ ಹಾಡು ಬಹಳ ಫೇಮಸ್ ಆಗಿದೆ.


Share It

You May Have Missed

You cannot copy content of this page