ಅಪರಾಧ ಸುದ್ದಿ

ಪ್ರೀತಿ ಒಪ್ಪದಿದ್ದಕ್ಕೆ ಯುವತಿಯನ್ನು ಕೊಲ್ಲಲು ಸ್ಕೆಚ್: ಹಾಡುಹಗಲೇ ಗನ್ ಹಿಡಿದು ಓಡಾಟ

Share It

ನೆಲಮಂಗಲ:ತನ್ನ ಪ್ರೀತಿಯನ್ನು ಒಪ್ಪದ ಯುವತಿಯನ್ನು ಕೊಲ್ಲಲು ಬಿಹಾರ ಮೂಲದ ಯುವಕನೊಬ್ಬ ಹಾಡುಹಗಲೇ ಗನ್ ಹಿಡಿದು ಓಡಾಡಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಯುವತಿ ತನ್ನ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಗನ್ ಹಿಡಿದು ಕೊಲ್ಲಲು ಪ್ರಯತ್ನಿಸಿದ್ದಾನೆ. ಆನ್‌ಲೈನ್ ಮೂಲಕ ಗನ್ ಖರೀದಿಸಿದ್ದ ಎಂದು ಹೇಳಲಾಗುತ್ತಿದೆ.

ಯುವತಿ ಸಮಯ ಪ್ರಜ್ಞೆಯಿಂದ ೧೧೨ ಗೆ ಕರೆ ವಿಷಯ ತಿಳಿಸಿದ್ದು, ತಕ್ಷಣವೇ ಪೊಲೀಸರು ಆಗಮಿಸಿ, ಬಿಹಾರ ಮೂಲದ ಯುವಕನನ್ನು ಬಂಧ£ ಮಾಡಿದ್ದಾರೆ. ಆತ ಗನ್ ಹಿಡಿದು ತಿರುಗಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


Share It

You cannot copy content of this page