ರಾಜಕೀಯ ಸುದ್ದಿ

ಸಿಕ್ಕಿಂ ರಾಜ್ಯದ ವಿಧಾನಸಭಾ ಚುನಾವಣೆ: SKMಗೆ ಭಾರೀ ಜಯ

Share It

ಬೆಂಗಳೂರು:

ಈಶಾನ್ಯ ಭಾರತದ ಸಿಕ್ಕಿಂ ರಾಜ್ಯದ ವಿಧಾನಸಭಾ ಚುನಾವಣಾ ಫಲಿತಾಂಶಕ್ಕಾಗಿ ಇಂದು ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿತ್ತು.

ಇದೀಗ ಬಂದ ಮಾಹಿತಿ ಪ್ರಕಾರ ಸಿಕ್ಕಿಂ ರಾಜ್ಯದ 31 ವಿಧಾನಸಭಾ ಸ್ಥಾನಗಳ ಪೈಕಿ SKM ಬರೋಬ್ಬರಿ 26 ಸ್ಥಾನಗಳನ್ನು ಗೆದ್ದುಕೊಂಡಿದೆ. ಜೊತೆಗೆ SKM 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಆದರೆ SDF ಮಾತ್ರ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಕೇವಲ 1 ಸ್ಥಾನದಲ್ಲಿ ಮಾತ್ರ SKM ಮುನ್ನಡೆ ಕಾಯ್ದುಕೊಂಡಿದೆ.

ಹೀಗಾಗಿ SKM ಅಧಿಕಾರ ಹಿಡಿದು ಸಿಕ್ಕಿಂ ರಾಜ್ಯದಲ್ಲಿ ಸರ್ಕಾರ ರಚಿಸಿ ಆಡಳಿತ ನಡೆಸುವುದು ಖಚಿತವಾಗಿದೆ.

ಸಿಕ್ಕಿಂ ರಾಜ್ಯದ ವಿಧಾನಸಭಾ ಚುನಾವಣಾ ಫಲಿತಾಂಶ

ಒಟ್ಟು ಸ್ಥಾನ: 32

SKM 31

ಇತರೆ 1

ಬಿಜೆಪಿ 0

ಕಾಂಗ್ರೆಸ್ 0


Share It

You cannot copy content of this page