ಮೊಟ್ಟೆ ಪ್ರಿಯರ ಮುಖದಲ್ಲಿ ಮಂದಹಾಸ: ಮೊಟ್ಟೆಯಲ್ಲಿ ಕಾನ್ಸರ್ ಕಾರಕ ಅಂಶ ವದಂತಿ ಸುಳ್ಳು ಎಂದ ಎಫ್‌ಎಸ್‌ಎಸ್‌ಎಐ

Share It

ನವದೆಹಲಿ: ದೇಶದಲ್ಲಿ ಬಳಕೆಯಲ್ಲಿರುವ ಮೊಟ್ಟೆಗಳಲ್ಲಿ ಯಾವುದೇ ಕ್ಯಾನ್ಸರ್ ಕಾರಕ ಅಂಶಗಳಿಲ್ಲ. ಇವು ಮಾಣವ ಬಳಕೆಗೆ ಯೋಗ್ಯವಾಗಿವೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಹೇಳಿದೆ.

ಮೊಟ್ಟೆಗಳು ಕ್ಯಾನ್ಸರ್ ಅಪಾಯವನ್ನು ಹೊಂದಿದೆ ಎಂಬ ಇತ್ತೀಚಿಗೆ ಹರಿಯಬಿಡಲಾಗಿತ್ತು. ಇದು ತಪ್ಪು ಮಾಹಿತಿಗಳಿಂದ ಕೂಡಿದ್ದು, ಇದಕ್ಕೆ ಯಾವುದೇ ಆಧಾರವಿಲ್ಲ. ಇದು ಅನಗತ್ಯವಾಗಿ ಸಾರ್ವಜನಿಕರಲ್ಲಿ ಭೀತಿ ಮೂಡಿಸುವ ಪ್ರಯತ್ನವಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ.

ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಮೆಟಾಬಾಲೈಟ್‌ಗಳಗಳಂತಹ ಕ್ಯಾನ್ಸರ್‌ಕಾರಕ ಪದಾರ್ಥಗಳಿವೆ ಎಂಬ ಮಾಧ್ಯಮ ವರದಿ ಮತ್ತು ಸಾಮಾಜಿನ ಮಾಧ್ಯಮ ಪೋಸ್ಟ್ಗಳನ್ನು ಅಲ್ಲಗಳೆದಿರುವ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಮಾಲಿನ್ಯಕಾರಕಗಳು, ವಿಷಗಳು ಮತ್ತು ಉಳಿಕೆಗಳು) ನಿಯಮಗಳು, ೨೦೧೧ರ ಅಡಿ ಕೋಳಿ ಮತ್ತು ಮೊಟ್ಟೆಗಳ ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ನೈಟ್ರೋಫ್ಯೂರಾನ್‌ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಸಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.


Share It

You May Have Missed

You cannot copy content of this page