ನವದೆಹಲಿ: ಕಾಂಗ್ರೆಸ್‌ನ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಇಂದು ನವದೆಹಲಿಯ ಸಂಸದ್ ಭವನದ ಸೆಂಟ್ರಲ್ ಸಭಾಂಗಣದಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸಂಸದೀಯ ಪಕ್ಷದ ನಾಯಕರಾಗಿ ಸೋನಿಯಾ ಗಾಂಧಿ ಅವರ ಹೆಸರನ್ನು ಪ್ರಸ್ತಾಪ ಮಾಡಿದರು.
ಖರ್ಗೆ ಅವರ ಪ್ರಸ್ತಾಪಕ್ಕೆ ಸಂಸದೀಯ ಮಂಡಳಿ ಸಭೆಯಲ್ಲಿ ಎಲ್ಲರೂ ಸರ್ವಾನುಮತದಿಂದ ಅನುಮೋದನೆ ಮಾಡಿದ್ದಾರೆ. ಗೌರವ್ ಗೊಗಾಯ್, ತಾರಿಕ್ ಅನ್ವರ್ ಮತ್ತು ಕೆ.ಸುಧಾಕರನ್ ಅವರು ಖರ್ಗೆ ಅವರ ಪಸ್ತಾವನೆಗೆ ಅನುಮೋದನೆ ಸೂಚಿಸಿದ್ದಾರೆ. ಇನ್ನು ಲೋಕಸಭೆಯ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಅವರ ಆಯ್ಕೆ ಬಹುತೇಕ ಖಚಿತವಾಗಿದ್ದು, ಸಭೆಯ ನಂತರ ಅಂತಿಮವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ.

